HDK ನಿಯೋಜಿಸಿಕೊಂಡಿದ್ದ ಅಧಿಕಾರಿಗಳಿಗೆ ಯಡಿಯೂರಪ್ಪ ಕೊಕ್

Published : Sep 19, 2019, 06:39 PM IST
HDK ನಿಯೋಜಿಸಿಕೊಂಡಿದ್ದ ಅಧಿಕಾರಿಗಳಿಗೆ ಯಡಿಯೂರಪ್ಪ ಕೊಕ್

ಸಾರಾಂಶ

ಹಿಂದಿನ ಮೈತ್ರಿ ಸರ್ಕಾರದಲ್ಲಿ ಆಗಿರುವ ನೇಮಕಗಳಿಗೆ ಸಿಎಂ ಬ್ರೇಕ್. ಸಿಎಂ ಕಚೇರಿಯಲ್ಲಿನ 21 ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಕೊಕ್. ಇಂದು ಬೆಳಿಗ್ಗೆ 21 ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ ಸಿಎಂ.

ಬೆಂಗಳೂರು, [ಸೆ.19]: ಮೈತ್ರಿ ಸರ್ಕಾರದ ಒಂದೊಂದೇ ಯೋಜನೆಗಳನ್ನು ತನಿಖೆಗೆ ಆದೇಶಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇದೀಗ ಕುಮಾರಸ್ವಾಮಿ ನಿಯೋಜಿಸಿದ್ದ ಸಿಬ್ಬಂದಿಗೆ ಕೊಕ್ ಕೊಟ್ಟಿದ್ದಾರೆ.

 ಸಿಎಂ ಕಚೇರಿಯಲ್ಲಿನ 21 ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಬಿಎಸ್ ವೈ ಕೊಕ್ ನೀಡಿದ್ದು,  ಇಂದು (ಗುರುವಾರ] ಬೆಳಿಗ್ಗೆ ಎಲ್ಲರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದರು. 

ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ HDKಗೂ ಎದುರಾಯ್ತು ಕಂಟಕ

21 ಸಿಬ್ಬಂದಿ ಸೇರಿದಂತೆ ಶೀಘ್ರಲಿಪಿಗಾರರು, ದಲಾಯತ್ ಗಳನ್ನು ಸಹ ವಾಪಸ್ ಮಾತೃ ಇಲಾಖೆಗೆ ಕಳುಹಿಸಲಾಗಿದೆ. ಓರ್ವ ಅಧೀನ ಕಾರ್ಯದರ್ಶಿ, ಇಬ್ಬರು ಶಾಖಾಧಿಕಾರಿಗಳು ಮತ್ತು ಐವರು ಹಿರಿಯ ಸಹಾಯಕರು ಕುಮಾರಸ್ವಾಮಿ ನಿಯೋಜನೆ ಮೇರೆಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕುಮಾರಸ್ವಾಮಿ ಆಡಳಿತದಲ್ಲಿ ಜಾರಿಗೆ ತಂದಿರುವ ಕೆಲ ಯೋಜನೆಗಳನ್ನು ಬಿಎಸ್‌ವೈ ತನಿಖೆಗೆ ಆದೇಶಿಸಿದ್ದು, ಜೊತೆ.ಕೆಲ ಟೆಂಡರ್‌ಗಳನ್ನು ಸಹ ರದ್ದು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು?