
ಬೆಂಗಳೂರು(ಡಿ.04): ನಿಶ್ಚಿತಾರ್ಥವಾದ ಬಳಿಕ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಲ್. ಶಿವರಾಮೇಗೌಡ ಮಾತು ಕೇಳಿ ವರ ಮದುವೆ ಬೇಡ ಎಂಬ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿವರಾಮೇಗೌಡ ಅವರ ಸೊಸೆಯ ಸೋದರ ಭದ್ರಾವತಿಯ ಯುವತಿಯ ಜೊತೆ 2016ರರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಎಂಗೇಜ್'ಮೆಂಟ್ ಬಳಿಕ ಬರೋಬ್ಬರಿ 30 ಲಕ್ಷ ಹಣ ಹಾಗೂ ಒಡವೆಯನ್ನೂ ವರನ ಕಡೆಯವರು ಪಡೆದಿದ್ದರು. ಅಲ್ಲದೇ ಹುಡುಗಿಯ ಮನೆಯವರಿಗೆ ಗೊತ್ತಿಲ್ಲದಂತೆ ಯುವತಿಯನ್ನು ಹೆದರಿಸಿ ಅತ್ಯಾಚಾರವನ್ನೂ ಸಹಾ ಮಾಡಿದ್ದಾನೆ. ಅತ್ಯಾಚಾರದ ಅಬ್ಬರಕ್ಕೆ ಗಾಯಗೊಂಡ ಯುವತಿಗೆ ಟ್ರೀಟ್'ಮೆಂಟ್ ಕೂಡಾ ಕೊಡಿಸಿದ್ದಾನೆ ಈ ಪ್ರಕರಣದ ವಿಲನ್ ಹಾಸನದ ಉದಯಗಿರಿ ಬಡಾವಣೆಯ ಮಧು.
ನಿಶ್ಚಿತಾರ್ಥದ ಬಳಿಕ ಕಂಡಕಂಡ ಹುಡುಗಿಯರ ಜೊತೆ ಸುತ್ತುತ್ತಿದ್ದ ಮಧು, ಇದನ್ನು ಯುವತಿ ಪ್ರಶ್ನಿಸಿದ್ದಕ್ಕೆ ಮದುವೆ ಬೇಡ ಎಂದಿದ್ದಾನೆ ಎನ್ನುವುದು ಯುವತಿಯ ಕುಟುಂಬದ ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.