ಏರ್ಪೋರ್ಟ್- ಮೈಸೂರು ಫ್ಲೈ ಬಸ್ ಟಿಕೆಟ್ ದರ ಇಳಿಕೆ

Published : Dec 04, 2017, 12:35 PM ISTUpdated : Apr 11, 2018, 12:49 PM IST
ಏರ್ಪೋರ್ಟ್- ಮೈಸೂರು ಫ್ಲೈ ಬಸ್ ಟಿಕೆಟ್ ದರ ಇಳಿಕೆ

ಸಾರಾಂಶ

ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ‘ಫ್ಲೈ ಬಸ್’ ಟಿಕೆಟ್ ದರವನ್ನು ಕೆಎಸ್ಸಾರ್ಟಿಸಿ ಇಳಿಸಿದೆ.

ಬೆಂಗಳೂರು: ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ‘ಫ್ಲೈ ಬಸ್’ ಟಿಕೆಟ್ ದರವನ್ನು ಕೆಎಸ್ಸಾರ್ಟಿಸಿ ಇಳಿಸಿದೆ.

ಪ್ರಸ್ತುತ ಬೆಂಗಳೂರು- ಮೈಸೂರು ಪ್ರಯಾಣಕ್ಕೆ 850 ರು. ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದೀಗ 3 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಏಕಕಾಲಕ್ಕೆ ಟಿಕೆಟ್ ಬುಕ್ ಮಾಡಿ ದರೆ ಟಿಕೆಟ್ ದರ ತಲಾ 700 ರು. ನಿಗದಿಗೊಳಿಸಲಾಗಿದೆ.

ಈ ಗುಂಪು ಬುಕಿಂಗ್‌ನಿಂದ ತಲಾ ಟಿಕೆಟ್ ದರ 150 ರು. ಕಡಿಮೆಯಾಗಲಿದೆ. ಈ ಮಾರ್ಗ ದಲ್ಲಿ ಗುಂಪಾಗಿ ಪ್ರಯಾಣಿಸುವವರು ಆ್ಯಪ್ ಆಧಾರಿತ ಟ್ಯಾಕ್ಸಿಗಳತ್ತ ಹೊರಳುತ್ತಿರುವುದರಿಂದ ಫ್ಲೈ ಬಸ್‌ಗಳಿಗೆ ಉಂಟಾಗುತ್ತಿರುವ ನಷ್ಟ

ತಪ್ಪಿಸಲು ಕೆಎಸ್ಸಾರ್ಟಿಸಿ ಈ ನಿರ್ಧಾರ ಕೈಗೊಂಡಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳು ಬೆಂಗಳೂರು-ಮೈಸೂರಿಗೆ 2400 ರು. ಪಡೆಯುತ್ತಿವೆ.

ಇದೀಗ 3 ಮಂದಿ ಟಿಕೆಟ್ ಬುಕ್ ಮಾಡಿದರೆ ಫ್ಲೈ ಬಸ್ ನಲ್ಲಿ 2100 ರು. ಆಗಲಿದೆ. ಟ್ಯಾಕ್ಸಿಗಿಂತ ಫ್ಲೈ ಬಸ್ ಅಗ್ಗ ಆಗುವುದರಿಂದ ಗುಂಪು ಪ್ರಯಾಣಿಕರು ಫ್ಲೈ ಬಸ್‌ಗಳತ್ತ ಆಕರ್ಷಿತರಾಗುತ್ತಾರೆ ಎಂಬುದು ಕೆಎಸ್ಸಾರ್ಟಿಸಿ ಲೆಕ್ಕಾಚಾರ. ಹಾಲಿ ಫ್ಲೈ ಬಸ್‌ಗಳಲ್ಲಿ 2+2 ವಿನ್ಯಾಸ ಆಸನ ವ್ಯವಸ್ಥೆ ಇದೆ. ಕೆಲ ಪ್ರಯಾಣಿಕರು ಏಕ ಆಸನಕ್ಕಾಗಿ ದುಬಾರಿ ಟಿಕೆಟ್ ದರ ಭರಿಸಲು ಸಿದ್ಧರಿರುತ್ತಾರೆ. 2+1 ಆಸನ ವಿನ್ಯಾಸದ ಫ್ಲೈ ಬಸ್‌ಗಳನ್ನು ಸೇವೆಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಎಸ್‌ಆರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಕೃತಕ ಬುದ್ಧಿಮತ್ತೆ ಬಳಸಿ ಫೋಟೋದಲ್ಲಿನ ಬದಲಾವಣೆಗೆ ಕಂಗನಾ ರಣಾವತ್ ಆಕ್ರೋಶ
Karnataka News Live: BBK 12 - ರಕ್ಷಿತಾ ಶೆಟ್ಟಿ ದನಿ ಅಡಗಿಸುವಷ್ಟು, ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ ಸೋಮಣ್ಣ! ಎಲ್ಲಿಂದ ಈ ಎನರ್ಜಿ?