ಬಾಲಕ ಅಲ್ಲಾ ಎಂದಿದ್ದಕ್ಕೆ ಉಗ್ರನೆಂದು ಪೊಲೀಸರನ್ನು ಕರೆಸಿದ ಶಿಕ್ಷಕಿ

By Suvarna Web DeskFirst Published Dec 4, 2017, 12:43 PM IST
Highlights

ಅಮೆರಿಕದ ಟೆಕ್ಸಾಸ್’ನ ಹೂಸ್ಟನ್ ಶಾಲೆಯೊಂದರಲ್ಲಿ ಆರು ವರ್ಷದ ಬುದ್ಧಿಮಾಂದ್ಯ ಮುಸ್ಲಿಂ ಬಾಲಕನೊಬ್ಬ ತರಗತಿಯಲ್ಲಿ ಜೋರಾಗಿ `ಅಲ್ಲಾ' ಎಂದು ಕೂಗಿದಕ್ಕಾಗಿ,ಆತನನ್ನು `ಭಯೋತ್ಪಾದಕ'ನೆಂದು ಭಾವಿಸಿ ಶಿಕ್ಷಕಿಯೊಬ್ಬರು ಪೊಲೀಸರನ್ನು ಕರೆಸಿದ ಘಟನೆ ನಡೆದಿದೆ.

ಹೂಸ್ಟನ್(ಡಿ.4): ಅಮೆರಿಕದ ಟೆಕ್ಸಾಸ್’ನ ಹೂಸ್ಟನ್ ಶಾಲೆಯೊಂದರಲ್ಲಿ ಆರು ವರ್ಷದ ಬುದ್ಧಿಮಾಂದ್ಯ ಮುಸ್ಲಿಂ ಬಾಲಕನೊಬ್ಬ ತರಗತಿಯಲ್ಲಿ ಜೋರಾಗಿ `ಅಲ್ಲಾ' ಎಂದು ಕೂಗಿದಕ್ಕಾಗಿ,ಆತನನ್ನು `ಭಯೋತ್ಪಾದಕ'ನೆಂದು ಭಾವಿಸಿ ಶಿಕ್ಷಕಿಯೊಬ್ಬರು ಪೊಲೀಸರನ್ನು ಕರೆಸಿದ ಆಘಾತಕಾರಿ ಘಟನೆ ನಡೆದಿದೆ.

ಮಹಮ್ಮದ್ ಸುಲೇಮಾನ್ ಜನ್ಮತಃ ಡೌನ್ ಸಿಂಡ್ರೋಮ್’ನಿಂದ ಬಳಲುತ್ತಿದ್ದು, ಆತನಿಗೆ ಬುದ್ಧಿಮಾಂದ್ಯ ಸಮಸ್ಯೆ ಇದೆ ಎಂದು ಆತನ ತಂದೆ ತಿಳಿಸಿದ್ದಾರೆ. ಬಾಲಕನ ತರಗತಿಗೆ ಯಾವಾಗಲೂ ಇದ್ದ ಶಿಕ್ಷಕಿ ಬಂದಿರದ ಹಿನ್ನೆಲೆಯಲ್ಲಿ, ಬೇರೊಬ್ಬ ಶಿಕ್ಷಕಿ ಬಂದಿದ್ದರು. ಆಕೆ ಬಾಲಕನ ವರ್ತನೆ ನೋಡಿ ಪೊಲೀಸರನ್ನು ಕರೆಸಿದ್ದಾರೆ. ಬಳಿಕವಷ್ಟೇ ಬಾಲಕನಿಗೆ ಸಮಸ್ಯೆ ಇರುವ ಬಗ್ಗೆ  ಆ ಶಿಕ್ಷಕಿಗೆ ತಿಳಿದು ಬಂದಿದೆ.

click me!