ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರಿಕೆ: ಜೆಡಿಎಸ್'ನಲ್ಲಿ ಚರ್ಚೆ

By Suvarna Web DeskFirst Published Aug 18, 2017, 11:31 PM IST
Highlights

ಎಲ್ಲವೂಸಚಿವಜಾರ್ಜ್ಅವರದೆದರ್ಬಾರ್ಎನ್ನುವಂತಾಗಿದೆಎನ್ನೋದುಜೆಡಿಎಸ್ಅಸಮಾಧಾನಕ್ಕೆಕಾರಣವಾಗಿದೆ. ಅಲ್ಲದೇಮಳೆಯಿಂದಆದಅವಾಂತರನಿರ್ವಹಣೆಮಾಡುವಲ್ಲಿಮೇಯರ್ಎಡವಿದ್ದಾರೆ

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರಿಸಬೇಕೆ ಬೇಡವೆ ಎನ್ನುವ ಕುರಿತು ಜೆಡಿಎಸ್ ಗಂಭೀರ ಚಿಂತನೆ ನಡೆಸಿದೆ. ನಿನ್ನೆ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಸಹ ಈ ಮೈತ್ರಿ ವಿಚಾರ ಚರ್ಚೆ ಆಗಿದೆ ಎನ್ನಲಾಗಿದೆ. ಪಾಲಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪಾಲಿಕೆ ಸದಸ್ಯರಿಗೆ ಯಾವುದೇ ಬೆಲೆ ಸಿಗ್ತಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಕೆಲಸವಿಲ್ಲ. ಎಲ್ಲವೂ ಸಚಿವ ಜಾರ್ಜ್‌ ಅವರದೆ ದರ್ಬಾರ್ ಎನ್ನುವಂತಾಗಿದೆ ಎನ್ನೋದು ಜೆಡಿಎಸ್ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಮಳೆಯಿಂದ ಆದ ಅವಾಂತರ ನಿರ್ವಹಣೆ ಮಾಡುವಲ್ಲಿ ಮೇಯರ್ ಎಡವಿದ್ದಾರೆ. ಹೀಗಾಗಿ ಈ ಬಾರಿ ಮೇಯರ್ ಪಟ್ಟ ಜೆಡಿಎಸ್‌ಗೆ ನೀಡಿದ್ರೆ ಮಾತ್ರ ಮೈತ್ರಿ ಮುಂದುವರಿಸಲು ಜೆಡಿಎಸ್ ಚಿಂತಿಸಿದೆ ಎನ್ನಲಾಗಿದೆ. ವಿಶೇಷ ಅಂದರೆ ಪಾಲಿಕೆಯಲ್ಲಿ ಮೈತ್ರಿ ಮುಂದುವರಿಸವ ಬಗ್ಗೆ ಪಾಲಿಕೆ ಸದಸ್ಯರ ಜೊತೆ ಚರ್ಚಿಸಿ ತಿರ್ಮಾನ ಮಾಡ್ತಿನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

click me!