ಕಾಂಗ್ರೆಸ್-ಜೆಡಿಎಸ್ ಸಭೆ ಅಪೂರ್ಣ, ರಾಜಕೀಯ ಹೈಡ್ರಾಮಾಕ್ಕೆ ತಾತ್ಕಾಲಿಕ ಬ್ರೇಕ್!

Published : Jul 07, 2019, 11:47 PM ISTUpdated : Jul 07, 2019, 11:57 PM IST
ಕಾಂಗ್ರೆಸ್-ಜೆಡಿಎಸ್ ಸಭೆ ಅಪೂರ್ಣ, ರಾಜಕೀಯ ಹೈಡ್ರಾಮಾಕ್ಕೆ ತಾತ್ಕಾಲಿಕ ಬ್ರೇಕ್!

ಸಾರಾಂಶ

ರಾಜೀನಾಮೆ ಪರ್ವದಿಂದ ತಲೆ ಕೆಡಿಸಿಕೊಂಡಿರುವ ದೋಸ್ತಿ ನಾಯಕರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಹಾಗಾದರೆ ಸಭೆಯಲ್ಲಿ ಏನಾಗುತ್ತಿದೆ ಎಂಬುದು ನಿಜಕ್ಕೂ ಬಹಳ ಕುತುಹಲಕಾರಿ ವಿಚಾರ. 

ಬೆಂಗಳೂರು[ ಜು. 07] ಶನಿವಾರ ಆರಂಭವಾದ ರಾಜೀನಾಮೆ ಪರ್ವ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದರೂ ಸೋಮವಾರ ಮತ್ತೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. 

ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಇರುವ ತಂತ್ರಗಳನ್ನು ಮೊದಲು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ವಿಮಾನ ನಿಲ್ದಾಣದಿಂದ ಬಂದವರೆ ತಕ್ಷಣ ಸಭೆ ಮೇಲೆ ಸಭೆ ಆರಂಭಿಸಿದರು.  

ಮುಂಬೈನಿಂದ ಸೋಮಶೇಖರ್ ಕೊಟ್ಟ ಏಟಿಗೆ ಥರಗುಟ್ಟಿ ಹೋದ ದೋಸ್ತಿ ನಾಯಕರು

ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ  ಕುಮಾರಸ್ವಾಮಿ, ಪರಮೇಶ್ವರ ಸೇರಿದಂತೆ ಎಲ್ಲ ಪ್ರಮುಖರು ಅತೃಪ್ತರ ಸವಾಲು ಮೆಟ್ಟಿ ನಿಲ್ಲಲು ಏನು ಮಾಡಬೇಕು ಎಂದು ಚರ್ಚೆ ನಡೆಸಿದರು. ಆದರೆ ಅಂತಿಮವಾಗಿ  ಜೆಡಿಎಸ್ -ಕಾಂಗ್ರೆಸ್ ಸಭೆ ಅಪೂರ್ಣವಾಗಿದ್ದು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ರಾಜಕೀಯ ಹೈಡ್ರಾಮಾ ಮುಂದುವರಿಯಲಿದ್ದು ಇದೀಗ  ರಾಜಕೀಯ ಹೈಡ್ರಾಮಾಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌