ಮುಂಬೈನಿಂದ ಸೋಮಶೇಖರ್ ಕೊಟ್ಟ ಏಟಿಗೆ ಥರಗುಟ್ಟಿ ಹೋದ ದೋಸ್ತಿ ನಾಯಕರು

Published : Jul 07, 2019, 09:07 PM IST
ಮುಂಬೈನಿಂದ ಸೋಮಶೇಖರ್ ಕೊಟ್ಟ ಏಟಿಗೆ ಥರಗುಟ್ಟಿ ಹೋದ ದೋಸ್ತಿ ನಾಯಕರು

ಸಾರಾಂಶ

ಸಿಎಂ ಕುಮಾರಸ್ವಾಮಿ ಅಮೆರಿಕದಿಂದ ಆಗಮಿಸಿ ಜೆಡಿಎಸ್ ನಾಯಕರು ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿ ರಾಜೀನಾಮೆ ಕೊಟ್ಟು ಮುಂಬೈಗೆ ಹಾರಿರುವ ಸಚಿವರಿಗೆ ಸಂದೇಶವೊಂದನ್ನು ನೀಡಬೇಕು ಎಂದುಕೊಂಡಿದ್ದಾಗಲೆ ಅತೃಪ್ತರು ಅಲ್ಲಿಂದಲೇ ಬಾಂಬ್ ಹಾಕಿದ್ದಾರೆ.

ಬೆಂಗಳೂರು/ ಮುಂಬೈ[ಜು. 07]  ನಾವು ಸಿಎಂ ಬದಲಾಬವಣೆ ಬೇಡಿಕೆಯನ್ನು ಇಟ್ಟಿರಲಿಲ್ಲ. ಮಂತ್ರಿಗಿರಿಯೂ ಬೇಕಿಲ್ಲ. ನಾವು 10 ಶಾಸಕರು ಒಂದಾಗಿದ್ದೇವೆ. ರಾಜೀನಾಮೆ ಹಿಂದಕ್ಕೆ ಪಡೆಯುವ ಮಾತೆ ಇಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮುಂಬೈನಿಂದ ಹೇಳಿದ್ದಾರೆ.

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅತೃಪ್ತ ಶಾಸಕರ ಪ್ರತಿನಿಧಿಯಾಗಿ ಸೋಮಶೇಖರ್ ಮಾತನಾಡಿದರು. ಮುನಿರತ್ನ ಮತ್ತು ಆನಂದ್ ಸಿಂಗ್ ಸಹ ಸೋಮವಾರ ತಮ್ಮ ಜತೆ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಬೆಂಗಳೂರಿಗೆ ಬಂದಿಳಿದ ಸಿಎಂ HDK ಮುಂದಿರುವ ಕೊನೆಯ 4 ಆಯ್ಕೆ

ಮಾಧ್ಯಮಗಳ ಮೂಲಕ ಈ ಮಾಹಿತಿ ದೋಸ್ತಿ ನಾಯಕರಿಗೆ ರವಾನೆಯಾಗಿದ್ದು ಅನಿವಾರ್ಯವಾಗಿ ಎಚ್ ಡಿ ಕುಮಾರಸ್ವಾಮಿ ಮತ್ತು ಪರಮೇಶ್ವರ ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ