ಕುಳಿತುಕೊಳ್ಳುವಷ್ಟು ಗುಣಮುಖರಾದ ಜಯಲಲಿತಾ

By suvananews web deskFirst Published Oct 22, 2016, 9:36 AM IST
Highlights

ಗುರುವಾರಷ್ಟೇ ಸಿಎಂ ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಜಯಾ ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ ಎಂದು ಎಐಎಡಿಎಂಕೆ ಪಕ್ಷದ ವಕ್ತಾರೆ ಸಿ.ಆರ್. ಸರಸ್ವತಿ ಹೇಳಿದ್ದರು. ಸೆ.22ರಿಂದಲೂ ಜಯಾ ಅವರು ಆಸ್ಪತ್ರೆಯಲ್ಲೇ ಇದ್ದಾರೆ.

ಚೆನ್ನೈ(ಅ.22); ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಪ್ರಜ್ಞೆ ಬಂದಿದ್ದು, ಆಸ್ಪತ್ರೆಯ ಬೆಡ್ ಮೇಲೆ ಸ್ವತಃ ತಾವೇ ಕುಳಿತುಕೊಳ್ಳುವಷ್ಟು ಶಕ್ತರಾಗಿದ್ದಾರೆ ಎಂದು ಚೆನ್ನೈನ ಅಪೋಲೋ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಜಯಾ ಅವರ ಆರೋಗ್ಯ ಸ್ಥಿತಿ ಮೊದಲಿಗಿಂತಲೂ ಚೇತರಿಕೆ ಕಂಡಿದೆ. ಆದರೆ, ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಪ್ರಜ್ಞೆ ಬಂದಿದ್ದು, ಎದ್ದು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಮೂರು ವಾರಗಳಿಂದ ಅವರಿಗೆ ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಕಾಲಾವಕಾಶದ ಅಗತ್ಯವಿದ್ದು, ಇನ್ನೂ ಕೆಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಕೃತಕ ಉಸಿರಾಟಕ್ಕೆ ಅಳವಡಿಸಲಾಗಿರುವ ಟ್ಯೂಬ್ ತೆಗೆದ ಬಳಿಕಷ್ಟೇ ಅವರು ಮಾತನಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗುರುವಾರಷ್ಟೇ ಸಿಎಂ ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಜಯಾ ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ ಎಂದು ಎಐಎಡಿಎಂಕೆ ಪಕ್ಷದ ವಕ್ತಾರೆ ಸಿ.ಆರ್. ಸರಸ್ವತಿ ಹೇಳಿದ್ದರು. ಸೆ.22ರಿಂದಲೂ ಜಯಾ ಅವರು ಆಸ್ಪತ್ರೆಯಲ್ಲೇ ಇದ್ದಾರೆ.

ವದಂತಿ ಹಬ್ಬಿಸಿದವರ ವಿರುದ್ಧ ಕೇಸ್: ಜಯಲಲಿತಾ ಆರೋಗ್ಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ಟ್ರಾಫಿಕ್ ರಾಮಸ್ವಾಮಿ ಮತ್ತು ಸಹಾಯಕಿ ಫಾತಿಮಾ ವಿರುದ್ಧ ಶುಕ್ರವಾರ ಚೆನ್ನೈನ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಎಐಎಡಿಎಂಕೆ ಕಾರ್ಯಕರ್ತ ವಿಜಯ ರಾಜ್ ಮತ್ತು ಕಿಶೋರ್ ಕೆ. ಸ್ವಾಮಿ ಸಲ್ಲಿಸಿದ್ದ ದೂರಿನ ಮೇರೆಗೆ ರಾಮಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜಯಾ ಆರೋಗ್ಯ ಕುರಿತು ವದಂತಿ ಹಬ್ಬಿಸಿದ ಪ್ರಕರಣಗಳಿಗೆ ಸಂಬಂಸಿ ಇದುವರೆಗೂ 58 ಪ್ರಕರಣಗಳು ದಾಖಲಾಗಿದ್ದು, 8 ಮಂದಿಯನ್ನು ಬಂಸಲಾಗಿದೆ. ಇದೇ ವೇಳೆ, ಸಿಎಂ ಜಯಾ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ತಮಿಳುನಾಡಿನಾದ್ಯಂತ ವಿಶೇಷ ಪ್ರಾರ್ಥನೆಗಳು ಶುಕ್ರವಾರವೂ ಮುಂದುವರಿದಿವೆ.

click me!