ಮಲ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಆರೋಪ

Published : Oct 22, 2016, 07:26 AM ISTUpdated : Apr 11, 2018, 12:50 PM IST
ಮಲ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಆರೋಪ

ಸಾರಾಂಶ

ವ್ಯಕ್ತಿಯೊಬ್ಬನ ವಿರುದ್ಧ ಮಲಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ತಲಘಟ್ಟಪುರದ ಅಂಜನಾಪುರದಲ್ಲಿ ಈ ಘಟನೆ ನಡೆದಿದ್ದು, ರಮೇಶ್ ಎಂಬಾತ ತನ್ನ ಮಲ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪ ಹೊತ್ತಿದ್ದಾನೆ.

ಬೆಂಗಳೂರು(ಅ.22): ವ್ಯಕ್ತಿಯೊಬ್ಬನ ವಿರುದ್ಧ ಮಲಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ತಲಘಟ್ಟಪುರದ ಅಂಜನಾಪುರದಲ್ಲಿ ಈ ಘಟನೆ ನಡೆದಿದ್ದು, ರಮೇಶ್ ಎಂಬಾತ ತನ್ನ ಮಲ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪ ಹೊತ್ತಿದ್ದಾನೆ.

ಯಶೋಧ ಎಂಬ 19 ವರ್ಷದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಮೂರು ವರ್ಷದ ಹಿಂದೆ ಯಶೋಧಾ ತಾಯಿ ಲಕ್ಷ್ಮೀ ತನ್ನ ಮೊದಲ ಗಂಡ ಬ್ಯಾಡಪ್ಪ ಎಂಬಾತನನ್ನು ಬಿಟ್ಟು ರಮೇಶ್'​ನನ್ನು ಮದುವೆಯಾಗಿದ್ದಳು. ಈ ವೇಳೆ ಯಶೋಧಾ ಕೂಡ ತನ್ನ ತಾಯಿಯೊಂದಿಗೆ ರಮೇಶ'​ನ ಮನೆಗೆ ಹೋಗಿದ್ದಳು. ಆದರೆ ತನ್ನ ಮಗಳ ಸಮಾನಳಾದ ಯಶೋಧ ಜತೆ ರಮೇಶ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಈ ವಿಚಾರ ಯಶೋಧಾಳ ತಾಯಿಗೆ ಗೊತ್ತಾಗುತ್ತದೆ ಎಂಬ ಕಾರಣದಿಂದ ರಮೇಶ್ ಆಕೆಗೆ ಸೀಮೆ ಎಣ್ಣೆ  ಸುರಿದು ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯಶೋಧ ನಿನ್ನೆ ರಾತ್ರಿ ಚಿಕಿತ್ಸೆ  ಫಲಕಾರಿಯಾಗದೇ ಕಿಮ್ಸ್  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪ ಹೊತ್ತ ರಮೇಶ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
Bank Holidays August: ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ ಬಂದ್‌, ಹಣಕಾಸು ಕೆಲಸಕ್ಕೂ ಮುನ್ನ ರಜಾ ದಿನಗಳ ಪಟ್ಟಿ ನೋಡಿ