
ಬೆಂಗಳೂರು(ಡಿ.09): ದೇಶವೇ ತನ್ನತ್ತ ತಿರುಗಿ ನೋಡುವಂತೆ ತನ್ನ ಮಗಳ ಮದುವೆ ಮಾಡಿದ ರೆಡ್ಡಿಗೆ ಸಂಕಷ್ಟ ಶುರುವಾಗಿದೆ. ನೂರು ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿದ ಆರೋಪ ಗಣಿಧಣಿ ಮೇಲಿದೆ. ಅಷ್ಟಕ್ಕೂ ಡೆತ್ ನೋಟಿನಲ್ಲಿ ಆರೋಪಿಸಿರುವ ಭ್ರಷ್ಟ KAS ಅಧಿಕಾರಿ ಭೀಮಾನಾಯ್ಕ್ ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಎಂಥಾ ನಂಟಿತ್ತು? ಇಲ್ಲಿದೆ ಸಂಪೂರ್ಣ ವಿವರ.
ಬಳ್ಳಾರಿ ತಹಸೀಲ್ದಾರ್ ಆಗಿದ್ದಾಗ ರೆಡ್ಡಿಯ ಬಂಟ
ಜನಾರ್ದನ ರೆಡ್ಡಿ ಹಾಗೂ KAS ಅಧಿಕಾರಿ ಭೀಮಾನಾಯ್ಕ್'ಗೂ ಒಳ್ಳೆಯ ಸಂಬಂಧವಿತ್ತು ಎನ್ನುವುದು ಸಾಬೀತಾಗಿದೆ. ಏಳು ವರ್ಷದ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜನಾರ್ದನ ರೆಡ್ಡಿ ಸಚಿವರಾಗಿದ್ದರು. ಈ ಸಮಯದಲ್ಲಿ ಭೀಮಾನಾಯ್ಕ್ ಬಳ್ಳಾರಿಯ ತಹಸೀಲ್ದಾರ್ ಆಗಿದ್ದರು. ಗಣಿ ಧಣಿ ರೆಡ್ಡಿ ಬಂಟನಾಗಿ, ಆಪ್ತನಾಗಿ ಕಾರ್ವನಿರ್ವಹಿಸುತ್ತಿದ್ದರು. ಚಾಗನೂರು ವಿಮಾನ ನಿಲ್ದಾಣ ವಿರೋಧಿಸಿ ರೈತ್ರು ಹೋರಾಟ ನಡೆಸುತ್ತಿದ್ದರು. 2009 ಫೆಬ್ರವರಿ 15ರಂದು ಗೋಡೆಹಾಳ್ ಕ್ರಾಸ್'ನಲ್ಲಿ ಹೆದ್ದಾರಿ ತಡೆದ ರೈತರ ಮೇಲೆ ಲಾಠಿ ಪ್ರಹಾರಕ್ಕೆ ಆದೇಶಿಸಿದ್ದು ಇದೇ ಅಧಿಕಾರಿ ಭೀಮಾನಾಯ್ಕ್.
ಈ ಕೆಎಎಸ್ ಅಧಿಕಾರಿಯ ಹುಟ್ಟೂರು ಬಳ್ಳಾರಿಯ ಮರಿಯಮ್ಮನಹಳ್ಳಿ ತಾಂಡ. ಇಲ್ಲಿ ಭೀಮಾನಾಯ್ಕ್ಗೆ' ಸ್ವಂತ ಮನೆಯಿದೆ. ಇವರ ಬಹುತೇಕ ಸ್ಥಿರಾಸ್ತಿ ಸಹೋದರಿ ಗಂಡನ ಹೆಸರಲ್ಲಿದೆ. ರೆಡ್ಡಿ ಮಗಳ ಮದುವೆಗಾಗಿ ಬ್ಲಾಕ್ ಅಂಡ್ ವೈಟ್ ಸಂಬಂಧ ಸಿಬಿಐ ತನಿಖೆ ಆಗ್ಬೇಕು. ಸಂಸದ ಶ್ರೀರಾಮುಲು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಅಂತ ಗಣಿ ಉದ್ಯಮಿ ಆಮ್ ಆದ್ಮಿ ಪಕ್ಷದ ಮುಖಂಡ ಟಪಾಲ್ ಗಣೇಶ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಇದೇ ಭೀಮಾನಾಯ್ಕ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಒಟ್ನಲ್ಲಿ ಜನಾರ್ದನರೆಡ್ಡಿ ಹಾಗೂ ಬಳ್ಳಾರಿ ಸಂಸದ ಶ್ರೀರಾಮುಲು ಜೊತೆಗಿನ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಗೆಳೆತನಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ಅದೇ ರೀತಿ ಅಕ್ರಮದ ಹೊಳಹುಗಳೂ ಬಿಚ್ಚಿಕೊಳ್ಳುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.