
ಅಹ್ಮದಾಬಾದ್(ಡಿ.12): ಐಡಿಎಸ್ ಯೋಜನೆಯಡಿ 13,860 ಕೋಟಿ ಆದಾಯ ಘೋಷಿಸಿರುವ ಗುಜರಾತ್‌ನ ಮಹೇಶ್ ಶಾ ಜತೆ ಕರ್ನಾಟಕ ಮತ್ತು ತೆಲಂಗಾಣದ ಕೆಲ ಪ್ರಭಾವಿ ವ್ಯಕ್ತಿಗಳು ಸಂಪರ್ಕ ಹೊಂದಿರುವ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
‘‘ಐಡಿಎಸ್ ಯೋಜನೆಯಡಿ ಆದಾಯವನ್ನಾಗಿ ಘೋಷಿಸಿಕೊಳ್ಳಲು ಗುಜರಾತ್ ಭಾಗಗಳಷ್ಟೇ ಅಲ್ಲದೆ, ದಕ್ಷಿಣ ರಾಜ್ಯಗಳ ಜನರು ಭಾರಿ ಮೊತ್ತದ ಹಣ ನೀಡಲಿದ್ದಾರೆ ಎಂಬ ಭಾವನೆ ಇತ್ತು ಎಂದು ಶಾ ಹೇಳಿಕೆ ನೀಡಿದ್ದಾರೆ,’’ ಎಂದು ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಕರ್ನಾಟಕದ ಕೈಗಾರಿಕೋದ್ಯಮಿಗಳ ಪೈಕಿ ರಾಜ್ಯ ರಾಜಕಾರಣದ ಮೇಲೆ ಪ್ರಮುಖ ಪಾತ್ರ ವಹಿಸುವ ವ್ಯಕ್ತಿಯೊಬ್ಬರು ಐಡಿಎಸ್ ಯೋಜನೆಯಡಿ ಘೋಷಿಸಿಕೊಳ್ಳಲು ದೊಡ್ಡ ಪ್ರಮಾಣದ ಹಣವನ್ನು ಶಾ ಅವರಿಗೆ ನೀಡಿದ್ದರು. ಅಲ್ಲದೆ, ಹೈದರಾಬಾದ್, ಮುಂಬೈ, ಅಹ್ಮದಾಬಾದ್, ವಡೋದರಾ ಮತ್ತು ಸೌರಾಷ್ಟ್ರ ಪ್ರದೇಶದ ಹಲವು ಪ್ರಭಾವಿ ವ್ಯಕ್ತಿಗಳಿಗೆ ತಮ್ಮ ಹಣವನ್ನು ಆದಾಯವನ್ನಾಗಿ ಘೋಷಿಸಲು ಮಹೇಶ್ ಶಾ ಅಗತ್ಯವಿತ್ತು ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ‘‘ಯಾವೆಲ್ಲ ವ್ಯಕ್ತಿಗಳು ಆದಾಯವನ್ನಾಗಿ ಘೋಷಿಸಿಕೊಳ್ಳಲು ಯಾವೆಲ್ಲ ವ್ಯಕ್ತಿಗಳು ಹಣ ನೀಡಿದ್ದರು ಎಂಬುದರ ಬಗ್ಗೆ ಶಾ ತುಟಿ ಬಿಚ್ಚುತ್ತಿಲ್ಲ. ಆದರೆ, ದಕ್ಷಿಣ ರಾಜ್ಯಗಳ ಕೆಲ ಪ್ರಭಾವಿ ನಾಯಕರು ಮತ್ತು ಶ್ರೀಮಂತ ವ್ಯಕ್ತಿಗಳು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟ ಸೂಚನೆ ನೀಡಿದ ಶಾ, ಅವರ ಹೆಸರುಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ,’’ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.