ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕ ಇರ್ಫಾನ್ ಗೆ ಶೌರ್ಯ ಗೌರವ

Published : Mar 20, 2019, 09:22 AM IST
ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕ ಇರ್ಫಾನ್ ಗೆ ಶೌರ್ಯ ಗೌರವ

ಸಾರಾಂಶ

ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕಗೆ ಶೌರ್ಯ ಗೌರವ| 2017ರಲ್ಲಿ 3 ಬಂದೂಕುದಾರಿ ಉಗ್ರರನ್ನು ತಡೆದಿದ್ದ ಬಾಲಕ

ನವದೆಹಲಿ[ಮಾ.20]: ಉಗ್ರರ ವಿರುದ್ಧ ಹೋರಾಟ ನಡೆಸುವ ಮೂಲಕ ಸಾಧನೆ ಮಾಡಿದ ಹಲವು ಯೋಧರು, ಹಿರಿಯ ವ್ಯಕ್ತಿಗಳು ಪ್ರತಿ ವರ್ಷ ಶೌರ್ಯ ಪುರಸ್ಕಾರಕ್ಕೆ ಆಯ್ಕೆಯಾಗುವುದು ಸಾಮಾನ್ಯ. ಆದರೆ ಈ ಬಾರಿಯ ವಿಶೇಷವೆಂದರೆ 16 ವರ್ಷದ ಇರ್ಫಾನ್‌ ಎಂಬ ಬಾಲಕನೊಬ್ಬ ಶೌರ್ಯ ಪುರಸ್ಕಾರ ಪಡೆದುಕೊಂಡಿದ್ದಾನೆ.

2017ರಲ್ಲಿ 3 ಬಂದೂಕುದಾರಿ ಉಗ್ರರು ಇರ್ಫಾನ್‌ನ ತಂದೆಯನ್ನು ಕೊಲ್ಲಲು ಆಗಮಿಸಿದ್ದರು. ಇರ್ಫಾನ್‌ ತಂದೆ ಮೊಹಮ್ಮದ್‌ ರಂಜಾನ್‌ ಶೇಖ್‌ ಅವರು ರಾಜಕೀಯ ಕಾರ್ಯಕರ್ತರಾಗಿದ್ದರಿಂದ ಉಗ್ರರು ಆತನ ಕೊಲೆಗೈಯ್ಯಲು ಬಂದಿದ್ದರು. ಈ ಸಂದರ್ಭದಲ್ಲಿ ಇರ್ಫಾನ್‌, ಮೂವರು ಉಗ್ರರು ಗುಂಡಿನ ದಾಳಿ ಮಾಡುತ್ತಿರುವ ಹೊರತಾಗಿಯೂ, ಉಗ್ರರು ಮನೆಯ ಬಾಗಿಲು ದಾಟಿ ಒಳಗೆ ಬಾರದಂತೆ ತಡೆದಿದ್ದ.

ಆದರೆ, ಉಗ್ರರ ಗುಂಡಿನ ದಾಳಿಯಲ್ಲಿ ಇರ್ಫಾನ್‌ ತಂದೆ ತೀವ್ರವಾಗಿ ಗಾಯಗೊಂಡಿದ್ದರು. ಅಲ್ಲದೆ, ಈ ಘಟನೆಯಲ್ಲಿ ಓರ್ವ ಉಗ್ರ ಸಹ ಗಾಯಗೊಂಡಿದ್ದ. ಉಗ್ರರ ಮೇಲೆಯೇ ದಾಳಿ ಮಾಡಿದ ಯುವಕನ ಸಾಹಸವು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!