ಪುಲ್ವಾಮಾ ದಾಳಿ ಮರೆಯಲ್ಲ, ಕ್ರಮ ನಿಶ್ಚಿತ: ಧೋವಲ್‌ ವಾರ್ನಿಂಗ್

By Web DeskFirst Published Mar 20, 2019, 8:54 AM IST
Highlights

CRPF ಯೋಧರ ಮೇಲೆ ಜೈಷ್ ಉಗ್ರ ಸಂಘಟನೆಯಿಂದ ಆತ್ಮಾಹುತಿ ದಾಳಿ| ಪುಲ್ವಾಮಾ ದಾಳಿ ಮರೆಯಲ್ಲ, ಕ್ರಮ ನಿಶ್ಚಿತ: ಧೋವಲ್‌ ವಾರ್ನಿಂಗ್

ಗುಡಗಾಂವ್‌[ಮಾ.20]: ಪುಲ್ವಾಮಾ ದಾಳಿ ಘಟನೆಯನ್ನು ಮರೆಯುವುದಿಲ್ಲ, ಮರೆಯಲು ಸಾಧ್ಯವೂ ಇಲ್ಲ. ಇಂಥ ಘಟನೆಯನ್ನು ಧೈರ್ಯವಾಗಿ ನಿಭಾಯಿಸಲು ದೇಶ ಸಮರ್ಥರಾಗಿದ್ದು, ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡಲು ಕಾಯುತ್ತಿದ್ದೇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಹೇಳಿದ್ದಾರೆ.

ಸಿಆರ್‌ಪಿಎಫ್‌ನ80ನೇ ಸಂಸ್ಥಾಪನಾ ದಿನದಲ್ಲಿ ಪಾಲ್ಗೊಂಡು ಮಾತನಾಡಿ, ಏನು ಮಾಡಬೇಕು, ನಮ್ಮ ಮಾರ್ಗ ಯಾವುದು ಎಂಬ ಬಗ್ಗೆ ನಮಗೆ ನಿಖರತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸೇನೆ ಮತ್ತು ನಾಯಕತ್ವ ಇಂಥವುಗಳನ್ನು ಧೈರ್ಯದಿಂದ ಎದುರಿಸಲು ಸಮರ್ಥವಾಗಿವೆ. ದೇಶ ಇಂಥ ಹಲವು ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿದೆ. ಪುಲ್ವಾಮಾ ದಾಳಿ ಮೂರು ದಶಕಗಳಲ್ಲೇ ಅತ್ಯಂತ ಕೆಟ್ಟಘಟನೆ ಎಂದಿದ್ದಾರೆ.

2019ರ ಫೆಬ್ರವರಿ 14ರಂದು ಶ್ರೀನಗರದಿಂದ ಜ್ಮು ಕಾಶ್ಮೀರದೆಡೆ ತೆರಳುತ್ತಿದ್ದ CRPF ಯೋಧರ ಮೇಲೆ ಜೈಷ್ ಉಗ್ರ ಸಂಘಟನೆಯು ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಭಾರತೀಯ ಸೇನೆಯ ಸುಮಾರು 40 ಯೋಧರು ಹುತಾತ್ಮರಾಗಿದ್ದರು. ಘಟನೆಯ ಬಳಿಕ ದೇಶದಾದ್ಯಂತ ಪಾಕ್ ವಿರುದ್ಧ ಪ್ರತೀಕಾರದ ಕೂಗು ಕೆಲಿ ಬಂದಿತ್ತು. ಈ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ್ದು, ಉಗ್ರರಿಗೆ ಆಶ್ರಯ ನಿಡುತ್ತಿರುವ ಪಾಕಿಸ್ತಾನದ ನಡೆಯನ್ನು ಖಂಡಿಸಲಾಗಿತ್ತು.

click me!