ತುಮಕೂರಿನ ಸಿದ್ಧಗಂಗಾ ಶಿವಕುಮಾರ ಸ್ವಾಮಿಜಿಯವರು ಸೋಮವಾರ ನಮ್ಮನ್ನಗಲಿದ್ದಾರೆ. ಎಲ್ಲರಿಗೂ ಬೆಳಕಾಗಿದ್ದ ಶ್ರೀಗಳ ನಿಧನಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಸಂತಾಪ ವ್ಯಕ್ತವಾಗಿದೆ.
ಬೆಂಗಳೂರು: ಸಿದ್ದಗಂಗಾ ಶಿವಕುಮಾರ ಶ್ರೀಗಳ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಸಂತಾಪ ವ್ಯಕ್ತಪಡಿಸಿದೆ.
ಶ್ರೀಗಳ ಅಗಲಿಕೆಗೆ ಜಮಾಅತೆನ ರಾಜ್ಯಾಧ್ಯಕ್ಷ ಮುಹಮ್ಮದ್ ಅತರುಲ್ಲಾ ಷರೀಫ್ ತೀವ್ರ ದುಃಖ ವ್ಯಕ್ತಪಡಿಸಿದ್ದು, ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮುಹಮ್ಮದ್ ಅತರುಲ್ಲಾ ಷರೀಫ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅನ್ನದಾನ ಮತ್ತು ವಿದ್ಯಾದಾನದ ಮೂಲಕ ಲಕ್ಷಾಂತರ ಮಂದಿ ಹೊಟ್ಟೆಯ ಮತ್ತು ಬೌದ್ಧಿಕ ಹಸಿವನ್ನು ತಣಿಸಿದರು. ಅವರೊಂದು ಸರ್ಕಾರದಂತೆ ಕಾರ್ಯನಿರ್ವಹಿಸಿದರು. ಆದ್ದರಿಂದ ಭಾರತ ಸರಕಾರವು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಅತರುಲ್ಲಾ ಷರೀಫ್ ಆಗ್ರಹಿಸಿದ್ದಾರೆ.
'ಕಾಯಕಯೋಗಿ'ಯ 15 ನುಡಿಮುತ್ತುಗಳು: ಪಾಲಿಸಿದರೆ ಕೈಲಾಸವೇ ನಮ್ಮದು
ಸಿದ್ದಗಂಗಾ ಶ್ರೀಗಳು ಓರ್ವ ವ್ಯಕ್ತಿ ಎಂಬುದಕ್ಕಿಂತ ಒಂದು ಶಕ್ತಿಯಾಗಿ ಬದುಕಿದವರು. ಅನೇಕಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜಕ್ಕೆ ಅರ್ಪಿಸಿದವರು. ಧರ್ಮಸ್ಥಳದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದೇ ಧಾರ್ಮಿಕ ಸೌಹಾರ್ದತೆಯ ಮೇಲೆ ಅವರಿಗಿದ್ದ ಬದ್ಧತೆಗೆ ಸಾಕ್ಷಿ. ಅವರು ಜಾತಿ ಧರ್ಮದ ಗೋಡೆಯನ್ನು ಮೀರಿ ಬೆಳೆದವರು. ಸಮಾಜವನ್ನು ಜನರ ಒಂದು ಗುಂಪಾಗಿ ಅವರು ನೋಡಿರುವರೇ ಹೊರತು ಹಿಂದೂ ಮುಸ್ಲಿಂ ಆಗಿ ಅಲ್ಲ. ಈ ಗುಣವೇ ಅವರನ್ನು ಅನನ್ಯಗೊಳಿಸಿದೆ, ಎಂದು ಶರೀಫ್ ಶ್ರೀಗಳ ಕೊಡುಗೆಯನ್ನು ಬಣ್ಣಿಸಿದ್ದಾರೆ.
ಜಾತಿ, ಮತ ಹಾಗೂ ಧರ್ಮ ಭೇದವಿಲ್ಲದೆ ದುಡಿದ ಚೇತನ: ರವಿ ಚನ್ನಣ್ಣನವರ್
ಶ್ರೀಗಳ ನಿಧನವು ಈ ಸಮಾಜಕ್ಕೆ ಬಹುದೊಡ್ಡ ನಷ್ಟ. ಅವರು ಪ್ರತಿಪಾದಿಸಿದ ಸೌಹಾರ್ದ ಸಮಾಜ ಕಾರ್ಯರೂಪಕ್ಕೆ ಬರಲಿ ಮತ್ತು ಅವರ ಅನುಯಾಯಿ, ಅಭಿಮಾನಿ ವರ್ಗಕ್ಕೆ ಅವರ ಅನುಪಸ್ಥಿತಿಯನ್ನು ಸಹಿಸುವ ಸಾಮರ್ಥ್ಯವನ್ನು ದೇವನು ದಯಪಾಲಿಸಲಿ ಎಂದು ಅವರು ಹೇಳಿದ್ದಾರೆ.