
ಬಂಟ್ವಾಳದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗಳ ಅನುದಾನ ರದ್ದು ಪಡಿಸಿರುವ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಿಡಿ ಕಾರಿದ್ದಾರೆ. ಊಟ ಕೊಡುವುದನ್ನು ನಿಲ್ಲಿಸುವವರು ಎಂಥಾ ರಾಕ್ಷಸರು? ಮುಖ್ಯಮಂತ್ರಿಯೇ ಇರಲಿ, ಬೇರೆ ಯಾರೇ ಆಗಲಿ ತಪ್ಪೇ ಅದು ಎಂದು ಸಿಎಂ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮಾನಾಥ್ ರೈಯವರೇ ಮುಖ್ಯಮಂತ್ರಿಯವರ ಶನಿ ನಿಮಗೆ ಹಿಡಿದಿದೆಯೇ? ಬರುವ ಸಲ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಆಸೆಯಿಲ್ಲವೇ?ಹೋಗಿ ಮುಖ್ಯಮಂತ್ರಿ ಕಾಲು ಹಿಡಿದು ತಾಕತ್ತಿದ್ರೆ ಮತ್ತೆ ಮಕ್ಕಳಿಗೆ ಊಟ ಕೊಡಿಸಿ ಮಕ್ಕಳಿಗೆ ಮತ್ತೆ ಊಟ ಕೊಡದೇ ಇದ್ರೆ ಪೂಜಾರಿ ಖಂಡಿತಾ ನಿಮ್ಮನ್ನು ಬಿಡಲ್ಲ ಎಂದು ಸಿಎಂ ಹಾಗೂ ರಮಾನಾಥ ರೈ ವಿರುದ್ಧ ಕಿಡಿ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.