
ನವದೆಹಲಿ (ಮೇ.10): ಪ್ರಧಾನಿ ನರೇಂದ್ರ ಮೋದಿ ಆಧುನೀಕತೆಗೆ, ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಾರೆನ್ನುವುದು ಗೊತ್ತಿರುವ ವಿಚಾರವೇ. ಸುಪ್ರೀಂಕೋರ್ಟ್’ನ ನೂತನ ಡಿಜಿಟಲ್ ವ್ಯವಸ್ಥೆಗೆ ಚಾಲನೆ ನೀಡಿ ಇಂದು ಒಂದು ಹೊಸ ಸಮೀಕರಣವನ್ನು ನೀಡಿದ್ದಾರೆ.
IT+IT=IT ಎಂದು ವರ್ಣಿಸಿದ್ದಾರೆ. ಅಂದರೆ Information Technology+Indian Talent= India Tommorrow ಎಂದು ಸಮಜಾಯಿಷಿ ನೀಡಿದ್ದಾರೆ.
ದೇಶವು ಹೆಚ್ಚು ಹೆಚ್ಚು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಸರ್ಕಾರದ ಲಾಭವನ್ನು ಪಡೆಯಲು ಎಲ್ಲಾ ವರ್ಗದ ಜನರು ತಂತ್ರಜ್ಞಾನವನ್ನು ಬಳಸಬೇಕು. ಕೆಲವೇ ಕೆಲವು ವ್ಯಕ್ತಿಗಳು ಬಳಸುವುದರಿಂದ ಇದು ಸಾಧ್ಯವಾಗುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಬಳಸಲು ಪ್ರಾರಂಭಿಸಬೇಕೆಂದು ಮೋದಿ ಹೇಳಿದ್ದಾರೆ.
ಇ-ಆಡಳಿತ ಸುಲಭ ಹಾಗೂ ಪರಿಣಾಮಕಾರಿ. ಇದು ಪರಿಸರ ಸ್ನೇಹಿ ಕೂಡಾ ಹೌದು. ಪೇಪರ್ ರಹಿತ ಆಡಳಿತದಿಂದ ಪರಿಸರಕ್ಕೆ ಅನುಕೂಲವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಸುಪ್ರೀಂಕೋರ್ಟ್ ನ ಐಸಿಎಂಐಎಸ್ ಡಿಜಿಟಲ್ ಸೇವೆಗೆ ಚಾಲನೆ ನೀಡಿದರು. ಇನ್ಮುಂದೆ ಜನರು ದೂರುಗಳನ್ನು ಆನ್’ಲೈನ್ ಮೂಲಕ ನೀಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.