ಸಂಬಂಧಿಕರ ಮದುವೆಗೆಂದು ಬಂದಿದ್ದ ನಿಶ್ಯಸ್ತ್ರ ಸೇನಾ ಅಧಿಕಾರಿಯೊಬ್ಬರನ್ನು ಮದುವೆ ಮನೆಯಿಂದ ಭಯೋತ್ಪಾದಕರು ನಿನ್ನೆ ರಾತ್ರಿ ಅಪಹರಿಸಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೈದಿದ್ದಾರೆ.
ಶ್ರೀನಗರ (ಮೇ.10): ಸಂಬಂಧಿಕರ ಮದುವೆಗೆಂದು ಬಂದಿದ್ದ ನಿಶ್ಯಸ್ತ್ರ ಸೇನಾ ಅಧಿಕಾರಿಯೊಬ್ಬರನ್ನು ಮದುವೆ ಮನೆಯಿಂದ ಭಯೋತ್ಪಾದಕರು ನಿನ್ನೆ ರಾತ್ರಿ ಅಪಹರಿಸಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೈದಿದ್ದಾರೆ.
ಮೃತಪಟ್ಟ ಯೋಧ ಉಮರ್ ಫಯಾಜ್ ಎಂದು ತಿಳಿದು ಬಂದಿದೆ. ಇವರ ಮೃತದೇಹ ಅನವರ ಸ್ವಗ್ರಾಮದಿಂದ 30 ಕಿಮೀ ದೂರದಲ್ಲಿರುವ ಶೋಪಿನ್ ನಲ್ಲಿ ಪತ್ತೆಯಾಗಿದೆ.
ಫಯಾಜ್ 5 ತಿಂಗಳ ಹಿಂದೆ ಸೇನೆಗೆ ಸೇರಿದ್ದ. ಸೋದರ ಸಂಬಂಧಿಯ ಮದುವೆಯೆಂದು ರಜೆ ಹಾಕಿ ಸ್ವಗ್ರಾಮ ಕುಲ್ಗಾನ್ ಗೆ ಬಂದಿದ್ದ. ಮೂವರು ಭಯೋತ್ಪಾದಕರು ಮದುವೆ ಮನೆಯ ಮೊದಲ ಮಹಡಿಯಿಂದ ಫಯಾಜ್ ನನ್ನು ಎಳೆದುಕೊಂಡು ಹೋಗಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸಲು ಕುಟುಂಬದವರು ಭಯಭೀತಗೊಂಡಿದ್ದರು. ಜೀವಂತವಾಗಿ ವಾಪಸ್ ಬರುತ್ತಾನೆಂದು ಭರವಸೆಯಿಟ್ಟುಕೊಂಡಿದ್ದರು. ದುರಾದೃಷ್ಟವಶಾತ್ ಮದುವೆಮನೆ ಮಸಣದ ಮನೆಯಾಯಿತು.