
ಅಹಮದಾಬಾದ್ (ಜ.18): ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಗಾಲ್-ಮೊಬೈಲ್ ನೀರು ಸಂಸ್ಕರಣ ಮತ್ತು ಶುದ್ಧೀಕರಣ ಜೀಪ್ ವಿಶೇಷ ಉಡುಗೊರೆಯಾಗಿ ನೀಡಿದರು. ಈ ಸಂಚಾರಿ ನೀರು ಸಂಸ್ಕರಣ ಜೀಪ್ ಅನ್ನು ಮೋದಿ, ಬನಸ್ಕಾಂತ ಜಿಲ್ಲೆಯ ಸುಯಿಗಾಮ್ ಜನತೆಗೆ ಅರ್ಪಿಸಿದ್ದಾರೆ.
ಅಹಮದಾಬಾದ್'ನ ಬಾವ್ಲಾ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೇತನ್ಯಾಹು ಉಪಸ್ಥಿತಿಯಲ್ಲಿ ಮೋದಿ ಈ ಕುರಿತು ಘೋಷಣೆ ಮಾಡಿದರು. ಭಾರತ-ಪಾಕಿಸ್ತಾನ ಗಡಿ ಪ್ರದೇಶದ ಸುಯಿಗಾಮ್‌ನಲ್ಲಿ ಉಪ್ಪು ನೀರು ಸಂಸ್ಕರಣ ಪ್ರಕ್ರಿಯೆಯ ನೇರ ಪ್ರಸಾರವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರದರ್ಶಿಸಲಾಯಿತು. ಕಳೆದ ವರ್ಷ ಇಸ್ರೇಲ್ ಭೇಟಿ ವೇಳೆ ನನಗೆ ಕೊಳಕು ನೀರನ್ನು ಶುದ್ಧೀಕರಿಸುವ ಸಂಚಾರಿ ವಾಹನವನ್ನು ಪ್ರದರ್ಶಿಸಲಾಗಿತ್ತು.
ಭಾರತ ತನ್ನ ದೇಶದಿಂದ ಅಂದಾಜು 3193 ಕೋಟಿ ರು ಮೊತ್ತದ ಸ್ಪೈಕ್ ಕ್ಷಿಪಣಿಗಳನ್ನು ಖರೀದಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ ಎಂದು ಇಸ್ರೇಲ್‌ನ ಮಾಧ್ಯಮಗಳು ಬುಧವಾರ ವರದಿ ಮಾಡಿವೆ. ವಿಶೇಷವೆಂದರೆ ನೇತನ್ಯಾಹು ಅವರ ಭೇಟಿಗೆ ಕೆಲವೇ ದಿನಗಳ ಮೊದಲು ಭಾರತ, ಈ ಕ್ಷಿಪಣಿ ಖರೀದಿ ಒಪ್ಪಂದ ರದ್ದುಗೊಳಿಸಿತ್ತು.ಹೀಗಾಗಿ ಪ್ರಧಾನಿ ಮೋದಿ ಜೊತೆಗಿನ ಭೇಟಿ ವೇಳೆ ಈ ಖರೀದಿ ವ್ಯವಹಾರ ಕುದುರಿಸುವಲ್ಲಿ ನೇತನ್ಯಾಹು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.