ಉಗ್ರರು ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿದ್ದ 3000 ಕುರಿಗಳ ರಕ್ಷಣೆ

By Web DeskFirst Published Aug 1, 2018, 1:01 PM IST
Highlights

ಕಾಮಾಂಧರಿಗೆ ಪ್ರಾಣಿಗಳೂ ಕೂಡ ಇತ್ತೀಚಿನ ದಿನಗಳಲ್ಲಿ ಬಲಿಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಇದೀಗ ಐಸಿಸ್ ಉಗ್ರರು ತಮ್ಮ ಕಾಮತೃಷೆ ತಿರಿಸಿಕೊಳ್ಳಲು ಬಳಸುತ್ತಿದ್ದ 3000ಕ್ಕೂ ಅಧಿಕ ಕುರಿಗಳನ್ನು ರಕ್ಷಣೆ ಮಾಡಲಾಗಿದೆ. 

ಡಮಾಸ್ಕಸ್: ಹಲವು ದೇಶಗಳಲ್ಲಿ ಮಹಿಳೆಯರನ್ನು ಅಪಹರಿಸಿ ಅವರನ್ನು ಲೈಂಗಿಕ ಜೀತದಾಳುಗಳಾಗಿ ಬಳಸಿಕೊಳ್ಳುವ ಐಸಿಸ್ ಉಗ್ರರ ಮತ್ತೊಂದು ಕರಾಳ ಮುಖ ಬೆಳಕಿಗೆ ಬಂದಿದೆ. ಸಿರಿಯಾದಲ್ಲಿ ಐಸಿಸ್ ಉಗ್ರರು, ತಮ್ಮ ಕಾಮತೃಷೆ ತೀರಿಸಿಕೊಳ್ಳಲು 3000 ಕ್ಕೂ ಹೆಚ್ಚು ಕುರಿ, ಆಡುಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು ಎಂಬ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

ಐಸಿಸ್ ಉಗ್ರರ ವಿರುದ್ಧ ಹೋರಾಡುತ್ತಿರುವ ಕುರ್ದಿಶ್ ಪೆಶ್ಮೆರಾ ಹೋರಾಟಗಾರರು ಇತ್ತೀಚೆಗೆ ಅಲ್ ತಬ್ನಿ ನಗರದಲ್ಲಿ ಉಗ್ರರು ಲೈಂಗಿಕ ತೃಷೆ ತೀರಿಸಿಕೊಳ್ಳಲು ಅಪಹರಿಸಿದ್ದ 3000 ಕುರಿ ಹಾಗೂ 700 ಆಡುಗಳನ್ನು ಬಂಧಮುಕ್ತಗೊಳಿಸಿದ್ದಾರೆ.

ಐಸಿಸ್ ಉಗ್ರರ ಹಿಡಿತದಲ್ಲಿದ್ದ ಮೂರು ಗ್ರಾಮಗಳನ್ನು ವಿಮೋಚನೆ ಮಾಡಲಾಗಿದೆ. ಈ ವೇಳೆ ಉಗ್ರರು ರೈತರ ಹೊಲದಲ್ಲಿ ಪ್ರಾಣಿ ವೇಶ್ಯಾವಾಟಿಕೆ ನಡೆಸುತ್ತಿರುವ ಸಂಗತಿ ಬಹಿರಂಗೊಂಡಿದೆ. ಕುರಿಗಳನ್ನು ಸಣ್ಣ ಸಣ್ಣ ಕೋಣೆಗಳಲ್ಲಿ ಕೂಡಿಟ್ಟು ಲೈಂಗಿಕ ಕ್ರಿಯೆಯಲ್ಲಿ ಉಗ್ರರು ತೊಡಗುತ್ತಿದ್ದರು. ಈ ಸ್ಥಳಕ್ಕೆ ತಿನಿತ್ಯ 10,000 ಉಗ್ರರು ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

click me!