ಗೋಹತ್ಯೆ ಉಗ್ರವಾದಕ್ಕಿಂತ ದೊಡ್ಡ ಅಪರಾಧ: ಬಿಜೆಪಿ ಶಾಸಕ!

Published : Aug 01, 2018, 12:32 PM ISTUpdated : Aug 01, 2018, 12:41 PM IST
ಗೋಹತ್ಯೆ ಉಗ್ರವಾದಕ್ಕಿಂತ ದೊಡ್ಡ ಅಪರಾಧ: ಬಿಜೆಪಿ ಶಾಸಕ!

ಸಾರಾಂಶ

ಗೋಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ | ರಾಜಸ್ಥಾನ ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಹೇಳಿಕೆ | ಗೋ ಹಂತಕರನ್ನು ಉಗ್ರವಾದಿ ಎಂದು ಪರಿಗಣಿಸಿ | ಗೋವು ಸಾಗಾಣೆದಾರರ ಮೇಲೆ ಹಲ್ಲೆ ಮಾಡಬೇಡಿ | ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಕರೆ ಮಾಡಿ

ಜೈಪುರ್(ಆ.1): ಗೋಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಅಭಿಪ್ರಾಯಪಟ್ಟಿದ್ದಾರೆ. ಉಗ್ರರು ತಮ್ಮ ಹಿಂಸಾ ಕೃತ್ಯದಿಂದ ಕೇವಲ ೫ ಜನರನ್ನು ಕೊಲ್ಲಬಹುದು, ಆದರೆ ಗೋಹತ್ಯೆ ಈ ದೇಶದ ಕೋಟ್ಯಾಂತರ ಜನರ ಭಾವನೆಗಳನ್ನು ಕೊಲ್ಲುತ್ತದೆ ಎಂದು ಅಹುಜಾ ಹೇಳಿದ್ದಾರೆ.

ಹಿಂದೂಗಳಿಗೆ ಗೋವು ತಾಯಿ ಇದ್ದಂತೆ. ಯಾರಾದರೂ ತಾಯಿಯ ಜೊತೆ ಅಸಭ್ಯವಾಗಿ ನಡೆದುಕೊಂಡರೆ ಅವರನ್ನು ಸುಮ್ಮನೆ ಬಿಡಲು ಹೇಗೆ ಸಾಧ್ಯ ಎಂದು ಅಹುಜಾ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಹತ್ಯೆ ಮಾಡುವವರನ್ನು ಉಗ್ರವಾದಿಗಳೆಂದು ಪರಿಗಣಿಸುವಂತೆ ಅಹುಜಾ ಆಗ್ರಹಿಸಿದ್ದಾರೆ. ಅಲ್ಲದೇ ಗೋಹತ್ಯೆ ತಡೆಯಲು ವಿಶೇಷ ಪೊಲೀಸ್ ತುಕಡಿ ರಚಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.

ಅಕ್ರಮ ಗೋವು ಸಾಗಾಣೆ ಮಾಡುವವರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದಿರುವ ಅಹುಜಾ, ಕೇವಲ ನಾಲ್ಕು ಏಟು ಹೊಡೆಯುವ ಬದಲು ಆ ಪಾಪಿಯನ್ನು ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಕರೆ ಮಾಡಿ, ಪೊಲೀಸರು ಬಂದು ಉಗ್ರವಾದಿಯನ್ನು ಬಂಧಿಸಿ ಕರೆದೊಯ್ಯುತ್ತಾರೆ ಎಂದು ಅಹುಜಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!
ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌