
ಚಂಡೀಗಢ: ಪಂಜಾಬ್‌ನಲ್ಲಿ ಆರೆಸ್ಸೆಸ್ ನಾಯಕ ಜಗದೀಶ್ ಕುಮಾರ್ ಗಾಗ್ನೇಜ ಸೇರಿದಂತೆ ಕೆಲವು ಪ್ರಮುಖರ ಹತ್ಯೆ ಪ್ರಕರಣಗಳಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿರುವುದು ಇದೇ ಮೊದಲ ಬಾರಿ ಬೆಳಕಿಗೆ ಬಂದಿದೆ.
ಹತ್ಯೆ ಪ್ರಕರಣಗಳಲ್ಲಿ ಭಯೋತ್ಪಾದಕ ಘಟಕಗಳ ಕೈವಾಡದ ಬಗ್ಗೆ, ನಾಲ್ವರು ದುಷ್ಕರ್ಮಿಗಳ ಬಂಧನದ ಬಳಿಕ ಬಹಿರಂಗವಾಗಿದೆ.
ಈ ಸಂಬಂಧ ವಿಶೇಷ ಪತ್ರಿಕಾಗೋಷ್ಠಿ ನಡೆಸಿದ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜ್ಯದಲ್ಲಿ ಕೋಮು ಘರ್ಷಣೆ ಸೃಷ್ಟಿಸಿ, ಶಾಂತಿ ಕದಡಲು ಐಎಸ್‌ಐ ತಂತ್ರ ರೂಪಿಸಿದ್ದ ಬಗ್ಗೆ ತಿಳಿಸಿದ್ದಾರೆ.
ಬಂಧಿತ ಶಂಕಿತರಲ್ಲಿ ಮೂವರ ಗುರುತು ಬಹಿರಂಗ ಪಡಿಸಲಾಗಿದ್ದು, ನಾಲ್ಕನೇ ವ್ಯಕ್ತಿಯ ಗುರುತು ಬಹಿರಂಗ ಪಡಿಸಲಾಗಿಲ್ಲ.
ಆರೆಸ್ಸೆಸ್ ನಾಯಕ ಜಗದೀಶ್, ರವೀಂದರ್ ಗೋಸೈನ್, ಶಿವಸೇನೆ ಕಾರ್ಮಿಕ ಘಟಕದ ಮುಖ್ಯಸ್ಥ ದುರ್ಗಾದಾಸ್ ಗುಪ್ತಾ, ಹಿಂದೂ ತಖ್ತ್ ಪ್ರಚಾರ ನಿರ್ವಾಹಕ ಅಮಿತ್ ಶರ್ಮಾ, ಡೇರಾ ಸಚ್ಚಾ ಸೌದಾ ಬೆಂಬಲಿಗ ಸತ್ಪಾಲ್ ಕುಮಾರ್, ಧರ್ಮಗುರು ಸುಲ್ತಾನ್ ಮಾಸಿಹ್ ಮುಂತಾದವರ ಹತ್ಯೆ ಪ್ರಕರಣ ಭೇದಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.