
ನವದೆಹಲಿ(ನ.25): ನಾಳೆ ಅಂದರೆ ನವೆಂಬರ್ 26ಕ್ಕೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಗರದ ಮೇಲೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿ ಬರೋಬ್ಬರಿ 10 ವರ್ಷ.
ಈ ಹಿನ್ನೆಲೆಯಲ್ಲಿ ನಿಮ್ಮ ಸುವರ್ಣನ್ಯೂಸ್.ಕಾಂ ಮುಂಬೈ ದಾಖಿಯ ಭಯಾನಕ ಘಟನೆಗಳನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡುತ್ತಿದೆ. ಅದರಂತೆ ಇಂದು ಮುಂಬೈ ದಾಳಿಗೆ ಕಾರಣವಾದ ಅಂಶಗಳತ್ತ ಗಮನ ಹರಿಸೋಣ.
ಅದು ನವೆಂಬರ್ 26, 2008. ದೇಶದ ವಾಣಿಜ್ಯ ರಾಜಧಾನಿ ಮುಂಬೈ ಆಗಷ್ಟೇ ಕತ್ತಲಿಗೆ ಮೈಯೊಡ್ಡಿತ್ತು. ಎಂದೂ ಮಲಗದ ನಗರ ಎಂದೇ ಖ್ಯಾತಿ ಗಳಿಸಿರುವ ಮುಂಬೈನಲ್ಲಿ ಆ ರಾತ್ರಿ ಕೂಡ ಜನರ ಮತ್ತು ವಾಹನಗಳ ಸದ್ದು ಜೋರಾಗಿತ್ತು.
ಆಗ ಏಕಾಏಕಿ ಸಮುದ್ರ ಮಾರ್ಗದಿಂದ ಬಂದ 10 ಜನ ಭಯೋತ್ಪಾದಕ ರಾಕ್ಷಸರು ನಗರದ ಪ್ರಮುಖ ಕಟ್ಟಡಗಳ ಮೇಲೆ ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಂಡರು. ಅಲ್ಲದೇ ಜನರನ್ನು ಒತ್ತೆಯಾಳಾಗಿರಿಸಿಕೊಂಡು, ಮನಬಂದಂತೆ ಕೊಲ್ಲ ತೊಡಗಿದರು.
ಜಿಹಾದ್‌ಗಾಗಿ ಬಂದವರಲ್ಲ, ಹುಡುಗಿಯರಿಗಾಗಿ ಬಂದವರು:
ಹೀಗೆ ಪಾಕಿಸ್ತಾನದಿಂದ ಬಂದ ಈ ರಾಕ್ಷಸರು ಕೇವಲ ಜಿಹಾದಿ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡು ಬಂದಿದ್ದರು ಎಂದು ನೀವು ತಿಳಿದರೆ ಅದು ತಪ್ಪಾದೀತು. ಕಾರಣ ಇವರೆಲ್ಲ ಕೇವಲ 'ಧರ್ಮ ರಕ್ಷಣೆ'ಗೆ ಬಂದವರಲ್ಲ, ಬದಲಿಗೆ ಭಾರತಕ್ಕೆ ಇವರನ್ನು ಕಳುಹಿಸುವ ಮೊದಲು ಮಿಶನ್ ಮುಗಿಸಿ ವಾಪಸ್ ಬಂದರೆ ಸುಂದರ ಹುಡುಗಿಯರ ಜೊತೆ ಮದುವೆ ಮಾಡಿಸುವುದಾಗಿ ಭರವಸೆ ನೀಡಲಾಗಿತ್ತು.
ಅಂದರೆ ಪಾಕ್‌ನಲ್ಲಿ ಕುಳಿತಿದ್ದ ದಾಳಿಯ ಮಾಸ್ಟರ್‌ಮೈಂಡ್‌ಗಳು ಬುದ್ದಿ ಇಲ್ಲದ ಇವರ ತಲೆಯಲ್ಲಿ ಕೇವಲ ಜಿಹಾದಿ ಸಿದ್ಧಾಂತವನ್ನಷ್ಟೇ ತುಂಬುತ್ತಿರಲಿಲ್ಲ. ಬದಲಿಗೆ ಸುಂದರ ಹುಡುಗಿಯರ ಕನಸನ್ನೂ ಬಿತ್ತಿ ಮುಗ್ಧ ಜನರನ್ನು ಕೊಲ್ಲಲು ಭಾರತಕ್ಕೆ ಕಳುಹಿಸುತ್ತಿದ್ದರು.
ಈ ಕುರಿತು ಮುಂಬೈ ದಾಳಿಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಾಬ್ ನ ವಿಚಾರಣೆ ನಡೆಸಿದ್ದ ಹಿರಿಯ ಅಧಿಕಾರಿಯೊಬ್ಬರು 'ಮೈ ನೇಶನ್' ಜೊತೆ ಮಾತನಾಡಿದ್ದಾರೆ.
ಅವರು ಹೇಳುವಂತೆ ಕಸಾಬ್ ವಿಚಾರಣೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಅವರ ತರಬೇತಿ ಮತ್ತು ಇತರ ಸಂಗತಿಗಳ ಬಗ್ಗೆ ಬಾಯ್ಬಿಟ್ಟಿದ್ದ. ಅಲ್ಲದೇ ಮಿಷನ್ ಯಶಸ್ವಿಯಾಗಿ ಮುಗಿಸಿ ವಾಪಸ್ ಬರುತ್ತಿದ್ದಂತೆ ತಮಗೆಲ್ಲಾ ಮದುವೆ ಮಾಡಿಸುವುದಾಗಿ ಅವರ ಬಾಸ್ ಹೇಳಿದ್ದನಂತೆ.
ಇನ್ನು ತರಬೇತಿ ಸಮಯದಲ್ಲಿ ಕಸಬ್ ಮತ್ತು ಆತನ ಸಂಗಡಿಗರಿಗೆ ಸುಂದರ ಹುಡುಗಿಯರ ಫೋಟೋ ತೋರಿಸಿ ವಾಪಸ್ ಬಂದ ಬಳಿಕ ಇವರಲ್ಲಿ ಇಷ್ಟವಾದವರ ಜೊತೆ ಮದುವೆಯಾಗುವಂತೆ ಆಸೆ ತೋರಿಸಲಾಗಿತ್ತು ಎಂದು ಖುದ್ದು ಕಸಾಬ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.