ಅಯೋಧ್ಯೆ ಧರ್ಮಸಭಾ ಅಂತ್ಯ: ಮಂದಿರಕ್ಕಾಗಿ ಬಿಗಿಪಟ್ಟು!

By Web DeskFirst Published Nov 25, 2018, 5:36 PM IST
Highlights

ಅಯೋಧ್ಯೆ ಧರ್ಮಸಭಾ ಕಾರ್ಯಕ್ರಮ ಅಂತ್ಯ! ರಾಮ ಮಂದಿರ ನಿರ್ಮಾಣಕ್ಕೆ ಹೆಚ್ಚಾದ ಒತ್ತಡ! ಸುಗ್ರೀವಾಜ್ಞೆಗಾಗಿ ವಿಹೆಚ್ ಪಿ, ಶಿವಸೇನೆ ಆಗ್ರಹ! ಧರ್ಮಸಭಾ ಕಾರ್ಯಕ್ರಮದಲ್ಲಿ 3 ಲಕ್ಷ ಭಕ್ತಾದಿಗಳು! ರಾಮ ಜನ್ಮಭೂಮಿಯಲ್ಲೇ  ರಾಮ ಮಂದಿರ ನಿರ್ಮಾಣದ ಶಪಥ

ಅಯೋಧ್ಯೆ(ನ.25): ಅಯೋಧ್ಯೆಯಲ್ಲಿ ನಡೆದ ಧರ್ಮಸಭಾ ಕಾರ್ಯಕ್ರಮ ಅಂತ್ಯಗೊಂಡಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಬೇಡಿಕೆಯನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ. 

ಮಂತ್ರ ಘೋಷಗಳೊಂದಿಗೆ ಪ್ರಾರಂಭವಾದ ಧರ್ಮಸಭಾ ಕಾರ್ಯಕ್ರಮದಲ್ಲಿ 3 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು,  ರಾಮ ಜನ್ಮಭೂಮಿಯಲ್ಲೇ  ರಾಮ ಮಂದಿರ ನಿರ್ಮಾಣವಾಗಬೇಕೆಂಬ ಪಟ್ಟನ್ನು ಮುಂದುವರೆಸಲು ವಿಶ್ವಹಿಂದೂ ಪರಿಷತ್ ನಿರ್ಧರಿಸಿದೆ.

Agar mamla adalat ke paas hi jana hai to chunav ke prachar ke darmyan usey istemaal na karein aur bata do ki bhaiyo aur behenon hamein maaf karo ye bhi hamara ek chunaavi jumla tha. Hinduon aur unki bhavnaon ke saath khilvaad na karein yahi kehne main yahan aaya hoon: U Thackeray pic.twitter.com/XDTNolvsk7

— ANI UP (@ANINewsUP)

ಇನ್ನು ಧರ್ಮಸಭಾದಲ್ಲಿ ಪಾಲ್ಗೊಂಡಿದ್ದ ಶಿವಸೇನೆ ಕೂಡ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದೆ. ನಿನ್ನೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪರಿವಾರ ಸಮೇತ ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

: Shiv Sena chief Uddhav Thackeray along with his son Aditya Thackeray offers prayer at Sarayu River in Ayodhya. Shiv Sena will hold an event in the city tomorrow over the matter of . pic.twitter.com/oJdSnVVwck

— ANI UP (@ANINewsUP)
click me!