
ನವದೆಹಲಿ (ಆ.10): ವಿಶ್ವವಿಖ್ಯಾತ ತಾಜ್'ಮಹಲ್ ಅಸ್ತಿತ್ವದ ಬಗ್ಗೆ ಮತ್ತೆ ಚರ್ಚೆ ಎದ್ದಿದೆ. ತಾಜ್’ಮಹಲ್’ನ್ನು ಶಹಜಹಾನ್ ಕಟ್ಟಿದ್ದಾ ಅಥವಾ ರಜಪೂತ ರಾಜನೊಬ್ಬ ಶಿವದೇವಾಲಯವನ್ನು ಮುಘಲ್ ಚಕ್ರವರ್ತಿಗೆ ಉಡುಗೊರೆಯಾಗಿ ನೀಡಿರುವುದಾ ಎಂಬುದರ ಬಗ್ಗೆ ಇರುವ ಜಿಜ್ಞಾಸೆಗೆ ಸ್ಪಷ್ಟೀಕರಣ ನೀಡಿ ಎಂದು ಕೇಂದ್ರೀಯ ಮಾಹಿತಿ ಆಯೋಗ ಕೇಂದ್ರ ಸಂಸ್ಕೃತಿ ಆಯೋಗಕ್ಕೆ ಸೂಚಿಸಿದೆ.
ತಾಜ್ ಮಹಲ್ ಅಸ್ತಿತ್ವದ ಬಗ್ಗೆ ಅನೇಕ ಇತಿಹಾಸಕಾರರು ಪ್ರಶ್ನೆಯೆತ್ತಿದ್ದಾರೆ. ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರ್’ಟಿಐ ಮೂಲಕ ಈ ವಿಚಾರ ಕೇಂದ್ರ ಮಾಹಿತಿ ಆಯೋಗಕ್ಕೆ ತಲುಪಿದ್ದು, ಇದೀಗ ಚೆಂಡು ಸಂಸ್ಕೃತಿ ಸಚಿವಾಲಯದ ಅಂಗಳದಲ್ಲಿ ನಿಂತಿದೆ.
ತಾಜ್ ಮಹಲ್ ಅಸ್ತಿತ್ವದ ಬಗ್ಗೆ ಎದ್ದಿರುವ ಅನುಮಾನಗಳಿಗೆ ಸ್ಪಷ್ಟ ಕಾರಣ ಕೊಟ್ಟು ಪೂರ್ಣವಿರಾಮ ಇಡಬೇಕೆಂದು ಶ್ರೀಧರ್ ಆಚಾರ್ಯ ಆಯೋಗ ಸಂಸ್ಕೃತಿ ಸಚಿವಾಲಯಕ್ಕೆ ಸೂಚಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.