'ಅಲ್ಪಸಂಖ್ಯಾತ' ಎನ್ನುವ ವಿಷಯ ರಾಜಕೀಯ ಲಾಭವಾಗಿದೆ: ವೆಂಕಯ್ಯ ನಾಯ್ಡು

By Suvarna Web DeskFirst Published Aug 10, 2017, 5:28 PM IST
Highlights

ನಾಳೆ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿರುವ ವೆಂಕಯ್ಯ ನಾಯ್ಡು, ಕೆಲವರು ಅಲ್ಪಸಂಖ್ಯಾತ ಎನ್ನುವ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹಮೀದ್ ಅನ್ಸಾರಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

ನವದೆಹಲಿ (ಆ.10): ನಾಳೆ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿರುವ ವೆಂಕಯ್ಯ ನಾಯ್ಡು, ಕೆಲವರು ಅಲ್ಪಸಂಖ್ಯಾತ ಎನ್ನುವ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹಮೀದ್ ಅನ್ಸಾರಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

"ದೇಶದ ಮುಸ್ಲಿಮರಲ್ಲಿ ಭಯ ಮತ್ತು ಅಭದ್ರತೆಯ ಭಾವನೆ ಇಣುಕುತ್ತಿದೆ. ದೇಶದೆಲ್ಲೆಡೆ ನನಗೆ ಕೇಳಿಬಂದ ಸಂಗತಿ. ಉತ್ತರ ಭಾರತದಿಂದ ಹೆಚ್ಚಾಗಿ ಕೇಳಿದ್ದೇನೆ," ಎಂದು ಅನ್ಸಾರಿ ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಸೇರಿದಂತೆ ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತ ಅತ್ಯಂತ ಸಹಿಷ್ಣು ದೇಶವಾಗಿದೆ. ದುರಾದೃಷ್ಟವಶಾತ್, ಕೆಲವರು ಅಲ್ಪಸಂಖ್ಯಾತ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತವನ್ನು ದೂಷಿಸುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಪ್ರಶ್ನಿಸುತ್ತಾರೆ. ಆದರೆ ಭಾರತ ಜಾತ್ಯಾತೀತತೆಗೆ ಉತ್ತಮ ಉದಾಹರಣೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಬಿಜೆಪಿ ಕೂಡಾ ಹಮೀದ್ ಅನ್ಸಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಹಮೀದ್ ಅನ್ಸಾರಿ ನಿವೃತ್ತಿಯ ನಂತರ ರಾಜಕೀಯ ಆಶ್ರಯವನ್ನು ಹುಡುಕುತ್ತಿದ್ದಾರೆ. ಅವರು ಈ ರೀತಿ ಹೇಳಿಕೆ ಕೊಡುವುದು ಅವರ ಘನತೆಗೆ, ಹುದ್ದೆಗೆ ಶೋಭೆ ತರುವಂತದ್ದಲ್ಲ. ಅನ್ಸಾರಿಯವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ಹೇಳಿದೆ.    

click me!