
ಮೈಸೂರು(ಎ.08): ಉಪಚುನಾವಣೆಯಲ್ಲಿ ಪ್ರಚಾರ ಮಾಡಬೇಕು ಎನ್ನುವ ಜೆಡಿಎಸ್ ಭಿನ್ನ ಶಾಸಕರ ಆಸೆಗೆ ಬ್ರೇಕ್ ಬಿದ್ದಿದೆ. ಏಳು ರೆಬಲ್ ಶಾಸಕರ ಆಸೆಗೆ ಕಾಂಗ್ರೆಸ್ ತಡೆ ಹಾಕಿದೆ. ದೇವೇಗೌಡರು ಅಸಮಾಧಾನಗೊಳ್ಳಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಈ ನಿರ್ಧಾರ ಮಾಡಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆ ಬಿದ್ದಿದೆ. ಆದರೆ, ಜೆಡಿಎಸ್ ನಿಂದ ಅಮಾನತುಗೊಂಡ ಏಳು ರೆಬಲ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಸಜ್ಜಾಗಿದ್ದರು. ಆದರೆ, ಅವರ ಈ ಆಸೆಗೆ ಕಾಂಗ್ರೆಸ್ ಬ್ರೇಕ್ ಹಾಕಿತ್ತು.
ಉಪಚುನಾವಣೆಗೆ ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದರೆ, ಜೆಡಿಎಸ್ ನಮಗೆ ಸಪೋರ್ಟ್ ಮಾಡ್ತಿದೆ ಅಂತಾ ಬಿಜೆಪಿ ಮುಖಂಡರು ಹೇಳುತ್ತಿದೆ. ಇಲ್ಲಾ ನಮಗೆ ಸಪೋರ್ಟ್ ಮಾಡುತ್ತಿದ್ದಾರೆ ಅಂತಾ ಕಾಂಗ್ರೆಸ್ ನಾಯಕರು ಹೇಳಿಕೊಂಡು ಓಡಾಡುತ್ತಿದ್ದಾರೆ. ಅಸಲಿಗೆ ಜೆಡಿಎಸ್ ಸಪೋರ್ಟ್ ಯಾರಿಗೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇದರ ನಡುವೆಯೇ ಜೆಡಿಎಸ್ ರೆಬಲ್ ಶಾಸಕರು ಕಾಂಗ್ರೆಸ್'ಗೆ ಬೆಂಬಲ ನೀಡಿದ್ದಾರೆ.
ದೇವೇಗೌಡರಿಗೆ ಹೆದರಿದ್ರಾ ಕೈ ನಾಯಕರು?
ಪ್ರಚಾರಕ್ಕೆ ರೆಬೆಲ್ ಶಾಸಕರು ಬಂದ್ರೆ, ದೇವೇಗೌಡರು ನಮ್ಮ ಮೇಲೆ ಅಸಮಾಧಾನಗೊಂಡು ಬಿಜೆಪಿಗೆ ಬೆಂಬಲ ಘೋಷಿಸುವ ಸಾಧ್ಯತೆ ಇತ್ತು. ಆದ್ರಿಂದ ನೀವು ಪ್ರಚಾರ ಮಾಡೋದು ಬೇಡಾ ಅನ್ನೋ ಕಿವಿ ಮಾತನ್ನು ಕೈ ನಾಯಕರು ಭಿನ್ನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಪ್ರಚಾರಕ್ಕೆ ಹೋಗುವ ಬಗ್ಗೆಯೂ ಭಿನ್ನರಲ್ಲೇ ಭಿನ್ನಾಭಿಪ್ರಾಯವೂ ಇತ್ತೆಂದು ಹೇಳಲಾಗಿದೆ.
ರೆಬಲ್ ಶಾಸಕರಾದ ಚಲುವರಾಯಸ್ವಾಮಿ,ಜಮೀರ್, ಬಾಲಕೃಷ್ಣ, ಬಂಡಿಸಿದ್ದೇಗೌಡ, ಅನ್ಸಾರಿ ಕಾಂಗ್ರೆಸ್ ಸೇರಲು ದಿನಗಣನೆ ಕೂಡಾ ಶುರುವಾಗಿದೆ. ಆದ್ರಿಂದ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಕೈ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುವ ಪ್ರಯತ್ನವನ್ನ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ನಾಯಕರೇ ಬ್ರೇಕ್ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.