
ಕ್ರಿಕೆಟ್ ಜೀವನದಿಂದ ನಿವೃತ್ತರಾದ ಬಳಿಕ ಕ್ರಿಕೆಟಿಗರು ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಿ ತಮ್ಮನ್ನು ಅಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ಅದಕ್ಕೆ ಭಿನ್ನವಾಗಿ ಪಠಾಣ್ ಸಹೋದರರು, ಒಂದೆಡೆ ಕ್ರಿಕೆಟ್ ಆಡುತ್ತಲೇ ಕ್ರಿಕೆಟಿಗರ ತರಬೇತಿಗಾಗಿ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ.
ಯುವ ಕ್ರಿಕೆಟ್ ಆಕಾಂಕ್ಷಿಗಳಿಗೆ ಉತ್ತಮ ತರಬೇತಿ ನೀಡುವ ಗುರಿಯಿಟ್ಟುಕೊಂಡು ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಹೋದರರು ನೊಯ್ಡಾದಲ್ಲಿ ‘ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್’ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ಭಾರತೀಯ ಸೇನೆಯೊಂದಿಗೆ ಸಹಯೋಗ ಹೊಂದಿರುವ ಅಕಾಡೆಮಿಯು ಇಬ್ಬರು ಕಾಶ್ಮೀರಿ ಯುವಕರನ್ನು ತರಬೇತಿಗಾಗಿ ಆಯ್ಕೆಮಾಡಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕುಪ್ವಾರ ಜಿಲ್ಲೆಯ ದಾನಿಶ್ ಖದೀರ್ (18) ಹಾಗೂ ಶಾರುಖ್ ಹುಸೈನ್ (20) ಆಯ್ಕೆಯಾದವರು. ಅರ್ಹತಾ ಪರೀಕ್ಷೆ ನಡೆಸಿದ ಬಳಿಕ, ಸುಮಾರು 100 ಆಕಾಂಕ್ಷಿಗಳ ಪೈಕಿ ಭಾರತೀಯ ಸೇನೆಯು ಇಬ್ಬರನ್ನು ಆಯ್ಕೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.