ವಿಶ್ವ ಯೋಗ ದಿನ ಸಂಭ್ರಮಿಸುವ 7 ವಿಧಾನಗಳು : ನೀವೇನು ಮಾಡಬಹುದು?

By Web Desk  |  First Published Jun 20, 2019, 7:24 AM IST

ಈ ಸಲ5ನೇ ವಿಶ್ವ ಯೋಗ ದಿನವನ್ನು ನಾವು ಆಚರಿಸುತ್ತಿದ್ದೇವೆ. ಯೋಗವನ್ನು ಗೌರವಿಸಲು, ಯೋಗದ ಕುರಿತು ಜಾಸ್ತಿ ಜನ ಮಾತನಾಡುವಂತೆ ಆಗಲು ಈ ದಿನವನ್ನು ನಾವು ಅದ್ದೂರಿಯಾಗಿ ಸಂಭ್ರಮಿಸಬೇಕಿದೆ. ಜಗತ್ತು ನಮ್ಮ ಕಡೆಗೆ ತಿರುಗಿ ನೋಡಬೇಕಿದೆ. ಹಾಗಾಗಬೇಕಾದರೆ ನಾಳೆ ನೀವು ಏನೇನು ಮಾಡಬಹುದು?


ಬೆಂಗಳೂರು (ಜೂ20) : ಫೆಬ್ರವರಿ 14 ರಂದು ಪ್ರೇಮಿಗಳ ದಿನ ಆಚರಿಸುತ್ತೇವೆ. ಅಕ್ಟೋಬರ್ 31ನ್ನು ಹ್ಯಾಲೋವಿನ್ ದಿನವನ್ನಾಗಿ ಆಚರಿಸಿ ಖುಷಿಪಡುತ್ತೇವೆ. ಮೇ ತಿಂಗಳ ಮೊದಲ ಭಾನುವಾರವನ್ನು ನಗುವಿನ ದಿನ ಎಂದು ಸಂಭ್ರಮಿಸುತ್ತೇವೆ. ಹೀಗೆ ಬೇರೆ ಬೇರೆ ದೇಶಗಳು ಹುಟ್ಟು ಹಾಕಿದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸುವ ನಾವು ನಮ್ಮ ಮಣ್ಣಿನ ಗುಣವೇ ಆಗಿರುವ, ನಮ್ಮ ದೇಶದ ಅಸ್ಮಿತೆಯಾಗಿರುವ ಯೋಗ ದಿನವನ್ನು ಬೇರೆ ದೇಶಗಳು ತಿರುಗಿ ನೋಡುವಂತೆ ಆಚರಿಸದಿದ್ದರೆ ಏನು ಚೆಂದ.  

ಈ ಸಲ5ನೇ ವಿಶ್ವ ಯೋಗ ದಿನವನ್ನು ನಾವು ಆಚರಿಸುತ್ತಿದ್ದೇವೆ. ಯೋಗವನ್ನು ಗೌರವಿಸಲು, ಯೋಗದ ಕುರಿತು ಜಾಸ್ತಿ ಜನ ಮಾತನಾಡುವಂತೆ ಆಗಲು ಈ ದಿನವನ್ನು ನಾವು ಅದ್ದೂರಿಯಾಗಿ ಸಂಭ್ರಮಿಸಬೇಕಿದೆ. ಜಗತ್ತು ನಮ್ಮ ಕಡೆಗೆ ತಿರುಗಿ ನೋಡಬೇಕಿದೆ. ಹಾಗಾಗಬೇಕಾದರೆ ನಾಳೆ ನೀವು ಏನೇನು ಮಾಡಬಹುದು?

Latest Videos

undefined

1 ಉತ್ತಮ ಆರೋಗ್ಯಕ್ಕಾಗಿ ಯೋಗ ಕಲಿಯಿರಿ  ಯೋಗವನ್ನು ಗೌರವಿಸಲು ಮತ್ತು ನಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ನಾವು ಮಾಡಬಹುದಾದ ಒಳ್ಳೆಯ ಕೆಲಸ ಯೋಗ ಕಲಿಯಲು ಆರಂಭಿಸುವುದು. 

2 ಯೋಗ ಕ್ಲಾಸಿಗೆ ಸೇರಿಕೊಂಡು ಅದರ ಫೋಟೋವನ್ನು ಎಲ್ಲರಿಗೂ ಕಳುಹಿಸುವುದು. ಯೋಗದ ಮಹತ್ವ ಸಾರುವ ವಿಚಾರಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚುವುದು.

3 ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾ, ಟ್ವೀಟರ್ ಡಿಪಿ ಬದಲಿಸುವುದು  ಯಾವ್ಯಾವುದೋ ಕಾರಣಕ್ಕೆ ನಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಪ್ರೊಫೈಲ್ ಪಿಕ್ ಅನ್ನು ಬದಲಿ ಸುವ ನಾವು ನಾಳೆ ಇಡೀ ದಿನ ಯೋಗಕ್ಕಾಗಿ ಡಿಪಿಯನ್ನು ಮೀಸಲಿಡಬಹುದು. ಎಲ್ಲರೂ ಯೋಗ ದಿನಾಚರಣೆ ಡಿಪಿಯನ್ನೇ ಬಳಸಿಕೊಂಡರೆ ಯೋಗ ಜಗತ್ತಿನ ಕಟ್ಟಕಡೆಯ ವ್ಯಕ್ತಿಗೂ ತಲುಪಲಿದೆ ಯೋಗ ಚಾಲೆಂಜ್  ಯೋಗ ಬಲ್ಲವರು ತಮ್ಮ ಆಪ್ತರಿಗೆ ಯೋಗ ಕಲಿಯಲು ಪ್ರೇರೇಪಿಸುವ ಸುಲಭ ವಿಧಾನ ಚಾಲೆಂಜ್ ನೀಡುವುದು. ಸೋಷಲ್  ಮೀಡಿಯಾದಲ್ಲಿ ಹ್ಯಾಶ್‌ಟ್ಯಾಗ್ ಮೂವ್‌ಮೆಂಟ್ ಆರಂಭಿಸಿ ಒಂದು 10 ಮಂದಿಗೆ 10 ದಿನಗಳಲ್ಲಿ ಯೋಗ ಕಲಿಯಿರಿ ಎಂಬ ಚಾಲೆಂಜ್ ನೀಡ ಬಹುದು. ಹಾಗೆ ಯೋಗ ಕಲಿತವರು ಮತ್ತೆ ಹತ್ತು ಮಂದಿಗೆ ಚಾಲೆಂಜ್ ನೀಡಬಹುದು.

4 ಉತ್ತಮ ಸಮಾಜಕ್ಕಾಗಿ ಯೋಗ  ನಮಗೆ ಸಮಾಜ ತುಂಬಾ ಕೊಟ್ಟಿದೆ, ನಮ್ಮ ಸಮಾಜಕ್ಕಾಗಿ ನಾವು ಏನಾದರೂ ವಾಪಸ್ ಕೊಡಬೇಕು ಎಂದುಕೊಳ್ಳುವವರು ಉಚಿತವಾಗಿ ಯೋಗ ಕ್ಲಾಸುಗಳನ್ನು ಆಯೋಜಿಸಬಹುದು. ಯೋಗ ಕ್ಲಾಸುಗಳಿಗೆ ದುಡ್ಡು ಕೊಟ್ಟುವ ಸೇರುವ ಅವಕಾಶ ಇಲ್ಲದ ಮಂದಿಗೆ ಉಚಿತ ಯೋಗ ಶಿಕ್ಷಣ ಸಿಗುವಂತೆ ಮಾಡಬಹುದು.

5 ಮಕ್ಕಳಿಗಾಗಿ ಯೋಗ ಸ್ಪರ್ಧೆ  ಶಾಲಾ, ಕಾಲೇಜು ಮಕ್ಕಳಿಗೆ ಯೋಗ ಸ್ಪರ್ಧೆ ಆಯೋಜಿಸಿ ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹದಾಯಕ ಬಹುಮಾನ ನೀಡಬಹುದು. ಯಾರು ಶಾಲೆಯ ಇನ್ನಿತರ ಮಕ್ಕಳಿಗೆ ಯೋಗ ಕಲಿಸುವರೋ ಅವರಿಗೆ ಶಿಕ್ಷಣ ವೆಚ್ಚ ಭರಿಸುವಂಥ ಕೆಲಸ ಮಾಡಬಹುದು.

6  ಯೋಗ ದಿನಾಚರಣೆ ನೇರಪ್ರಸಾರ ವ್ಯವಸ್ಥೆ  ಒಂದೋ ನೀವೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಬಹುದು. ಯೋಗ ಮಾಡಬಹುದು. ಯೋಗ ಮಾಡದವರು ಬೇರೆ ಬೇರೆ ಭಾಗಗಳಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ವೀಕ್ಷಿಸಲು ನಿಮ್ಮ ನಿಮ್ಮ ಏರಿಯಾಗಳಲ್ಲಿ ಬೃಹತ್ ಟಿವಿ ಪರದೆ ವ್ಯವಸ್ಥೆ ಮಾಡಬಹುದು. ನೂರಾರು ಮಂದಿ ಒಂದೇ ಕಡೆ ಕುಳಿತು ಯೋಗ ದಿನಾಚರಣೆ ವೀಕ್ಷಿಸಬಹುದು. ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಮಾಡುವುದನ್ನು ಕಣ್ತುಂಬಿಕೊಳ್ಳಬಹುದು.

7 ಟ್ವೀಟರ್‌ನಲ್ಲಿ ಹ್ಯಾಟ್‌ಟ್ಯಾಗ್ ಅಭಿಯಾನ  ಯೋಗದ ಮಹತ್ವ ಸಾರಲು ಟ್ವೀಟರ್‌ನಲ್ಲಿ ಹ್ಯಾಷ್‌ಟ್ಯಾಗ್ ಅಭಿಯಾನ ಆರಂಭಿಸ ಬಹುದು.  # yogaforlife, #yogaislife, #Yogabharatha, #yogisindia ಅಭಿಯಾನಗಳನ್ನು ನೀವೂ ಬೆಂಬಲಿಸಬಹುದು.

click me!