ಆಯೋಗದಿಂದ ನೋಟಿಸ್ ಶಾಕ್, ಬಿಜೆಪಿ ಸಂಸದನ ಸ್ಥಾನಕ್ಕೆ ಕುತ್ತು?

Published : Jun 19, 2019, 10:55 PM IST
ಆಯೋಗದಿಂದ ನೋಟಿಸ್ ಶಾಕ್, ಬಿಜೆಪಿ ಸಂಸದನ ಸ್ಥಾನಕ್ಕೆ ಕುತ್ತು?

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪ್ರವೇಶ ಮಾಡಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ನವದೆಹಲಿ[ಜೂ. 19]  ಸಂಸದ ಸನ್ನಿ ಡಿಯೋಲ್ ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ನಿಗದಿಪಡಿಸಲಾಗಿದ್ದ 70 ಲಕ್ಷ ರೂ.  ವೆಚ್ಚದ ಮಿತಿಯನ್ನು ಮೀರಿದ್ದು ವಿವರಣೆ ನೀಡಲು ಸೂಚಿಸಿದೆ.

ಪಂಜಾಬ್ ನ ಗುರ್ದಾಸ್ಪುರ್ ನಿಂದ ಸನ್ನಿ ಡಿಯೋಲ್ ಆಯ್ಕೆಯಾಗಿದ್ದರು. ಗುರ್ದಾಸ್ಪುರ್ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ವಿಪೂಲ್ ಉಜ್ವಲ್ ಅವರು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು  86 ಲಕ್ಷ ರೂ.ಖರ್ಚು ಮಾಡಿದ ಮಾಹಿತಿ ಇದೆ ಎಂದಿದ್ದಾರೆ.

ಚುನಾವಣಾ ಆಯೋಗದ ಮಾರ್ಗದರ್ಶಿ ಹೇಳುವಂತೆ ಚುನಾವಣಾ ಪ್ರಕ್ರಿಯೆ ಮುಗಿದ 90 ದಿನಗಳ ಒಳಗೆ ನೋಂದಾಯಿತ ರಾಜಕೀಯ ಪಕ್ಷಗಳು ಖರ್ಚು ವೆಚ್ಚದ ವಿವರವನ್ನು ಸಲ್ಲಿಕೆ ಮಾಡಬೇಕು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸತತ 5ನೇ ಬಾರಿಗೆ iPhone ಕಳೆದುಕೊಂಡ ಭಾರತೀಯ ಮಹಿಳೆ, ಮತ್ತೆ ಮತ್ತೆ ಫೋನ್ ಹುಡುಕಿಕೊಂಡ ಸಿಕ್ರೇಟ್ ರಿವೀಲ್
100 ವರ್ಷಗಳಲ್ಲಿ ಇದೇ ಮೊದಲು, ಚಿರತೆಯಂತಹ ಹೊಸ ಬೆಕ್ಕಿನ ಪ್ರಭೇದ ಪತ್ತೆ; DNA ಪರೀಕ್ಷೆಯಲ್ಲಿ ಶಾಕಿಂಗ್ ಸಂಗತಿ ರಿವೀಲ್