
ಬಾಲಸೋರ್ (ಒಡಿಶಾ)(ಫೆ.11): ದೇಶದ ಮೇಲೆ ದಾಳಿ ನಡೆಸಲು ಶತ್ರು ಪಾಳೆಯದಿಂದ ನುಗ್ಗಿ ಬರುವ ಕ್ಷಿಪಣಿಗಳನ್ನು ಆಗಸದಲ್ಲೇ ಹೊಡೆದುರುಳಿಸಬಲ್ಲ ಛೇದಕ ಕ್ಷಿಪಣಿಯೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಎ) ಶನಿವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಅತ್ಯಂತ ಎತ್ತರ ಹಾಗೂ ತೀರಾ ಕೆಳಹಂತದಲ್ಲಿ ಒಳಬರುವ ಕ್ಷಿಪಣಿಗಳನ್ನು ಹೊಡೆದುರುಳಿಸುವ ನಿಟ್ಟಿನಲ್ಲಿ ಈ ಯಶಸ್ಸು ಮಹತ್ವದ್ದಾಗಿದೆ.
ಒಡಿಶಾದ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಗ್ಗೆ 7.45ಕ್ಕೆ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಈ ಪರೀಕ್ಷೆ ಸಲುವಾಗಿಯೇ ಬಂಗಾಳ ಕೊಲ್ಲಿಯಲ್ಲಿ ನಿಲುಗಡೆ ಮಾಡಲಾಗಿದ್ದ ನೌಕೆಯೊಂದರಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. 2000 ಕಿ.ಮೀ. ದೂರದಿಂದ ಬಂದ ಕ್ಷಿಪಣಿಯನ್ನು ಅತ್ಯಂತ ಕರಾರುವಾಕ್ಕಾಗಿ ರಾಡಾರ್‌ಗಳು ಪತ್ತೆ ಹಚ್ಚಿದವು. ಭೂ ವಾತಾವರಣದಿಂದ 50 ಕಿ.ಮೀ. ಎತ್ತರದಲ್ಲಿ ಅದನ್ನು ಛೇದಕ ಕ್ಷಿಪಣಿ ಹೊಡೆದುರುಳಿಸಿತು. ಈ ಕ್ಷಿಪಣಿಗೆ ಪಿಡಿವಿ ಎಂದು ಕರೆಯಲಾಗಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.