ಹಾವೇರಿಯಲ್ಲಿ ಅರ್ಧಕ್ಕೆ ಇಳಿಯಿತು ರಾಷ್ಟ್ರಧ್ವಜಕ್ಕೆ ಅಪಮಾನ: ಯುವಕನ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ

By Suvarna Web DeskFirst Published Jul 19, 2017, 11:11 AM IST
Highlights

ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದೆ. ಹತ್ತಿಮತ್ತೂರಿನ ಗ್ರಾ.ಪಂ. ಕಚೇರಿಯಲ್ಲಿದ್ದ ಧ್ವಜವನ್ನು ಯುವಕನ್ನೊಬ್ಬ ಮಟಮಟ ಮಧ್ಯಾಹ್ನವೇ ಅರ್ಧಕ್ಕೆ ಇಳಿಸಿ ಅಪಮಾನ ಮಾಡಿದ್ದಾನೆ.

ಹಾವೇರಿ(ಜು.19): ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದೆ. ಹತ್ತಿಮತ್ತೂರಿನ ಗ್ರಾ.ಪಂ. ಕಚೇರಿಯಲ್ಲಿದ್ದ ಧ್ವಜವನ್ನು ಯುವಕನ್ನೊಬ್ಬ ಮಟಮಟ ಮಧ್ಯಾಹ್ನವೇ ಅರ್ಧಕ್ಕೆ ಇಳಿಸಿ ಅಪಮಾನ ಮಾಡಿದ್ದಾನೆ.

ಭಾನುವಾರ ರಜಾದಿನವಾಗಿದ್ದರಿಂದ ಗ್ರಾಮಪಂಚಾಯ್ತಿಯಲ್ಲಿ ಯಾರು ಇರಲಿಲ್ಲ. ಈ ಸಮಯವನ್ನು ನೋಡಿಕೊಂಡ ಯುವಕನೊಬ್ಬ ಗ್ರಾಮ ಪಂಚಾಯ್ತಿ ಆವರಣಕ್ಕೆ ಹೋಗಿ ಈವೊಂದು ದುಷ್ಕೃತ್ಯವೆಸಗಿದ್ದಾನೆ. ಇದೆಲ್ಲ ಗ್ರಾಮ ಪಂಚಾಯ್ತಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 2 ಗಂಟೆಗಳ ಕಾಲ ರಾಷ್ಟ್ರಧ್ವಜ ಅರ್ಧಕ್ಕೆ ಹಾರಾಡಿದೆ. ಬಳಿಕ ಇದನ್ನು ನೋಡಿದ ಕೆಲ ಸ್ಥಳೀಯ ಯುವಕ ಗ್ರಾಮಸ್ಥರಿಗೆ ಸುದ್ದಿ ತಿಳಿಸಿ, ಧ್ವಜವನ್ನು ಮತ್ತೆ ಮೇಲಕ್ಕೆ ಹಾರಿಸಲಾಯಿತು.

ಇನ್ನೂ ಈ ಘಟನೆ ನಡೆದು ಮೂರು ದಿನವಾದ್ರೂ ಇಲ್ಲಿನ ಪಿಡಿಓ ಮಾತ್ರ ಏನೂ ನಡೆದಿಲ್ಲ ಎನ್ನುವಂತೆ ವರ್ತಿಸುತ್ತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಪಿಡಿಓ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

click me!