
ನವದೆಹಲಿ(ಜು.19): ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ಜಮ್ಮು-ಕಾಶ್ಮೀರಕ್ಕೆ ಲಗ್ಗೆ ಇಡಲು ಯತ್ನಿಸುತ್ತಿದ್ದಾರೆ ಎಂಬ ಆತಂಕದ ವಿಷಯ ಹೊರಬಿದ್ದಿದೆ. ಐಸಿಸ್‌ಗೆ ಉತ್ತೇಜನ ನೀಡಲು ‘ಅನ್ಸರುಲ್ ಖಲೀಫಾ-ಜಮ್ಮು ಕಾಶ್ಮೀರ್’ (ಖಲೀಫಾ ಸಾಮ್ರಾಜ್ಯದ ಯೋಧರು) ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ಸದ್ಯದ ಮಟ್ಟಿಗೆ ಇದು ವಾಟ್ಸಪ್ ರೀತಿಯ ಮೊಬೈಲ್ ಸಾಮಾಜಿಕ ಮಾಧ್ಯಮವಾದ ‘ಟೆಲಿಗ್ರಾಂ’ ಮೂಲಕ ಸಕ್ರಿಯವಾಗಿದೆ.
ಇಸ್ಲಾಮಿಕ್ ಸ್ಟೇಟ್'ನ ತತ್ವಗಳನ್ನು ಇದರ ಮೂಲಕ ಹರಿಬಿಡಲಾಗುತ್ತಿದೆ. ಕಳೆದ ಜೂನ್ ೨ರಂದು ಆರಂ‘ವಾದ ಈ ಗ್ರೂಪ್‌ನಲ್ಲಿ ೧೦೦ಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸಂದೇಶವೊಂದರಲ್ಲಿ ಜಮ್ಮು-ಕಾಶ್ಮೀರದ ಮುಸ್ಲಿಂ ಪೊಲೀಸರಿಗೆ ಮನವಿಯೊಂದನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ‘ಎಲ್ಲ ಮುಸ್ಲಿಂ ಪೊಲೀಸರು ನಿಮ್ಮ ಮೇಲಧಿಕಾರಿಗಳ ಆದೇಶ ಧಿಕ್ಕರಿಸಬೇಕು. ಮುಸ್ಲಿಂ ಹಾಗೂ ಇಸ್ಲಾಂ ವಿರೋಧಿಗಳತ್ತ ನಿಮ್ಮ ಗನ್ ಚಲಾಯಿಸಬೇಕು’ ಎಂದು ಮನವಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.