
ನನ್ನ ಕಾಲುಗಳೆರಡನ್ನೂ ಕತ್ತರಿಸಿದ್ದಾರೆ ಎಂದು ತಿಳಿದಾಗ, ನಾನು ಕಾಲು ಬೆರಳುಗಳಿಗೆ ನೇರಳೆ ಬಣ್ಣದ ನೇಲ್‌ಪಾಲಿಶ್ ಹಚ್ಚಿದ್ದೆ ಎಂದು ನೆನಪಾಯಿತು. ಅದಕ್ಕೂ ಒಂದು ತಿಂಗಳು ಮುಂಚೆ ನನ್ನ ಬಲಗೈಯನ್ನು ಕತ್ತರಿಸಿ ತೆಗೆಯಲಾಗುತ್ತದೆ. ಬಲಗೈಗೂ ಮುನ್ನ ಎಡಗೈ ಕೂಡ ನನ್ನ ದೇಹದಿಂದ ದೂರಾಗಿತ್ತು.
ನನಗಾಗ 32 ವರ್ಷ ವಯಸ್ಸು. ಎಲ್ಲರಂತೆ ಹ್ಯಾಪಿ ಯಾಗಿದ್ದೆ. ಒಳ್ಳೆ ಕೆಲಸ ಇತ್ತು. ನೆಮ್ಮದಿಯ ಸಂಸಾರ ಇತ್ತು. ಇಂಥಾ ಸಂದರ್ಭದಲ್ಲಿ ನಾನು ಕಾಂಬೋಡಿಯಾಗೆ ಖುಷಿಯಿಂದ ಟೂರ್ ಹೋಗಿದ್ದೆ. ಅಲ್ಲಿಂದ ಬಂದು ನನ್ನ ಬಕೆಟ್ ಲಿಸ್ಟ್‌ನಲ್ಲಿದ್ದ ಕಾಂಬೋಡಿಯಾ ಟೂರ್ ಅನ್ನುವ ವಾಕ್ಯವನ್ನು ಹೊಡೆದೆ. ಆಗಲೆ ನನಗೆ ಜ್ವರ ಬಂದಿದ್ದು. ಸಾಮಾನ್ಯ ಜ್ವರ ಅನ್ನೋ ಥರಾನೇ ಶುರುವಾಗಿದ್ದು. ಹಾಗೆ ಶುರುವಾದ ಜ್ವರ ನಿಲ್ಲಲಿಲ್ಲ. ಜ್ವರದಿಂದಾಗಿಯೇ ಅಂಗ ವೈಫಲ್ಯಕ್ಕೀಡಾದೆ. ಅಂಗ ವೈಫಲ್ಯದಿಂಗಾಗಿ ಇನ್ನೇನು ಸಾವಿನ ಬಾಗಿಲನ್ನು ತಟ್ಟಿದೆ. ಆದರೆ ಬದುಕಿ ಬಂದೆ. ಅದೆಲ್ಲಾ ಆಗಿ ಒಂದು ತಿಂಗಳಲ್ಲಿ ಕೈಗಳನ್ನು ಕಳೆದುಕೊಂಡೆ. ಅನಂತರ ಕಾಲುಗಳನ್ನು. ಆಮೇಲೆ ಗೊತ್ತಾಯಿತು. ನಂಗೆ ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್ ಆಗಿತ್ತು. ಡಾಕ್ಟರ್‌ಗಳಿಗೆ ಅದು ಪಠ್ಯ ಪುಸ್ತಕಗಳಲ್ಲಿ ಮಾತ್ರ ಓದಿ ಗೊತ್ತಿತ್ತು.
ಇಷ್ಟೆಲ್ಲಾ ಆದಾಗ ಸುಮ್ಮನಿರುವುದು ಹೇಗೆ ಸಾಧ್ಯ. ಕೋಪೋದ್ರೇಕಕ್ಕೆ ಒಳಗಾಗಿದ್ದೆ. ತುಂಬಾ ಅಪ್‌ಸೆಟ್ ಆಗಿದ್ದೆ. ಎಲ್ಲಕ್ಕಿಂತ ಜಾಸ್ತಿ ಹರ್ಟ್ ಆಗಿದ್ದೆ. ಇದೆಲ್ಲಾ ಯಾಕಾಯಿತು? ಯಾಕೆ ಈ ಕಷ್ಟಬಂತು? ನಾನೇನು ತಪ್ಪು ಮಾಡಿದ್ದೆ? ನನಗೆ ಯಾಕೆ ಈ ಸ್ಥಿತಿ ಬಂತು? ಅತ್ತು ಕಣ್ಣೀರೆಲ್ಲಾ ಖಾಲಿಯಾಯಿತು. ಆ್ಠಠಿ ್ಛಜ್ಞಿa್ಝ್ಝy, ಐ dಛ್ಚಿಜಿdಛಿd ಜಿಠಿ ಡಿas ಠಿಜಿಞಛಿ ಠಿಟ ಞಟvಛಿ ಟ್ಞ. ನಾನು ಮತ್ತೆ ಮೊದಲಿನಂತಾಗಬೇಕು ಅಂದುಕೊಂಡೆ. ಅದಕ್ಕಾಗಿ ಓಡುವಂತಾಗಬೇಕು. ಮೊದಲು ಕಷ್ಟಪಟ್ಟು ತೂಕವನ್ನು ಉಳಿಸಿಕೊಂಡೆ. ಫಿಟ್ ಆದೆ. ಸತತ ಪ್ರಯತ್ನಗಳ ನಂತರ ಒನ್ ಫೈನ್ ಡೇ ಓಡಲು ಶುರುಮಾಡಿದೆ. ಅವತ್ತು ನಾನು ನನ್ನನ್ನು ಗೆದ್ದೆ. ಇವತ್ತು ನಾನು ಮತ್ತೆ ವಾಪಸ್ ತಿರುಗಿ ನೋಡುತ್ತೇನೆ. ವಿಧಿ ನನ್ನ ಜೊತೆ ಆಟವಾಡಿತು. ನನ್ನನ್ನು ಸೋಲಿಸಲು ಯತ್ನಿಸಿತು. ಆದರೆ ಕಡೆಗೂ ನನ್ನನ್ನೂ ಸೋಲಿಸಲು ಸಾಧ್ಯವಾಗಲಿಲ್ಲ. ನಾನೇ ಗೆದ್ದೆ.
ಕೈಕಾಲುಗಳು ಇದ್ದರೂ ಇಲ್ಲದಿದ್ದರೂ ನಾನು ನನ್ನಿಷ್ಟದಂತೆ ಬದುಕುತ್ತೇನೆ. ಕನಸುಗಳನ್ನು ಕಾಣುತ್ತೇನೆ.
ಥ್ಯಾಂಕ್ಯೂ ಬೀಯಿಂಗ್ ಯೂ
(ಫೋಟೋ- ಜಿ ಕುಮಾರನ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.