
ನವದೆಹಲಿ(ಜೂನ್ 20): ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಎರಡಕ್ಕೂ ಪರಿಣಾಮಕಾರಿಯಾಗಿರುವ ಯೋಗಾಸನಕ್ಕೆ ವಿಶ್ವಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಭಾರತದಲ್ಲಂತೂ ಯೋಗಶಿಕ್ಷಣಕ್ಕೆ ವಿಪರೀತ ಬೇಡಿಕೆ ಇದೆ ಎಂದು ಅಸ್ಸೋಚಾಮ್(Assocham) ಸಂಸ್ಥೆಯ ಅಧ್ಯಯನವೊಂದು ಮಾಹಿತಿ ನೀಡಿದೆ. ಈ ಅಧ್ಯಯನದ ಪ್ರಕಾರ ದೇಶದಲ್ಲಿ 3 ಲಕ್ಷ ಯೋಗಶಿಕ್ಷಕರ ಕೊರತೆ ಇದೆಯಂತೆ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗಾಸನದ ಟ್ರೆಂಡ್ ಶುರುವಾಗಿದೆ. ಚೀನಾದಲ್ಲಂತೂ ಇದಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಸುಮಾರು 3 ಸಾವಿರ ಭಾರತೀಯ ಯೋಗಶಿಕ್ಷಕರು ಚೀನಾದ ವಿವಿಧೆಡೆ ಕೆಲಸ ಮಾಡುತ್ತಿದ್ದಾರೆ. ಹೃಷಿಕೇಶ ಮತ್ತು ಹರಿದ್ವಾರದಿಂದಲೇ ಹೆಚ್ಚಾಗಿ ಯೋಗ ಶಿಕ್ಷಕರು ಚೀನಾಗೆ ರಫ್ತಾಗುತ್ತಿದ್ದಾರೆ.
ಎಲ್ಲೆಲ್ಲಿ ಯೋಗಕ್ಕೆ ಬೇಡಿಕೆ?
ಬಹಳಷ್ಟು ಶಾಲೆಗಳಲ್ಲಿ ದೈಹಿಕ ಫಿಟ್ನೆಸ್'ಗಾಗಿ ಮಕ್ಕಳಿಗೆ ಯೋಗಾಸನವನ್ನು ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಬಹುದು. ಬಹುತೇಕ ಸೆಲಬ್ರಿಟಿಗಳು ವೈಯಕ್ತಿಕವಾಗಿ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುವ ಟ್ರೆಂಡ್ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಯೋಗ ಥೆರಪಿಸ್ಟ್'ಗಳಿರುತ್ತಾರೆ. ಅನೇಕ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಯೋಗ ತರಬೇತುದಾರರನ್ನ ನೇಮಿಸಿಕೊಳ್ಳಲಾಗುತ್ತದೆ. ಪ್ರತೀ ಏರಿಯಾದಲ್ಲಿ ಕನಿಷ್ಠ ಒಂದಾದರೂ ಯೋಗಕೇಂದ್ರಗಳಿರುತ್ತವೆ. ಸ್ವತಂತ್ರವಾಗಿ ಯೋಗಶಾಲೆಗಳನ್ನು ನಡೆಸಬಹುದು.
ಯೋಗ ಶಿಕ್ಷಣ ವ್ಯವಸ್ಥೆ?
ಕರ್ನಾಟಕದಲ್ಲಿರುವ ವಿವೇಕಾನಂದ ಯೋಗ ಕೇಂದ್ರ ಸೇರಿದಂತೆ ದೇಶಾದ್ಯಂತ ಬಹಳಷ್ಟು ಯೋಗಶಿಕ್ಷಣ ಸಂಸ್ಥೆಗಳು ವಿವಿಧ ವ್ಯಾಪ್ತಿಯ ಶಿಕ್ಷಕರ ಕೋರ್ಸ್'ಗಳನ್ನು ಒದಗಿಸುತ್ತಿವೆ. ಸಾಮಾನ್ಯ ಯೋಗ ತರಬೇತಿಯಿಂದ ಯೋಗ ಥೆರಪಿ ಕೋರ್ಸ್'ಗಳನ್ನು ಹೇಳಿಕೊಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.