ಕುಡಿದ ಅಮಲಿನಲ್ಲಿ ಈಜಲು‌ ಹೋಗಿದ್ದ ಹೆಲ್ತ್ ಇನ್ಸ್​ಪೆಕ್ಟರ್​ ಸಾವು

By Web DeskFirst Published Apr 25, 2019, 1:49 PM IST
Highlights

ಕುಡಿದ ಅಮಲಿನಲ್ಲಿ ಈಜಲು‌ ಹೋಗಿದ್ದ ಹೆಲ್ತ್ ಇನ್ಸ್​ಪೆಕ್ಟರ್ ಸಾವು| ನಾಲ್ಕು ಜನ ಸ್ನೇಹಿತರೊಂದೊಂದಿಗೆ ಮದ್ಯ ಸೇವಿಸಿ‌ ಬಳಿಕ ಕರೆಯಲ್ಲಿ ಈಜಲು ತೆರೆಳಿದ್ದರು| ಈ ವೇಳೆ ಕಾಲಿಗೆ ಸುತ್ತಿಕೊಂಡ ಗಿಡದಿಂದಾಗಿ ನೀರಿನಲ್ಲಿ‌ಮುಳುಗಿ ಉಸಿರುಗಟ್ಟಿ ಸಾವು.

ರಾಮನಗರ[ಏ.25]: ಕುಡಿದ ಅಮಲಿನಲ್ಲಿ ಈಜಲು‌ ಹೋಗಿದ್ದ ಹೆಲ್ತ್ ಇನ್ಸ್​ಪೆಕ್ಟರ್ ಸಾವು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಬಿಡದಿಯ ಅರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಂಕರ್(32) ಮೃತ ದುರ್ವೈವಿ. ಮಾಗಡಿಯ ಬೈಚಾಪುರ ಗ್ರಾಮದ ನಿವಾಸಿಯಾಗಿರುವ ಇವರು, ನಾಲ್ಕು ಜನ ಸ್ನೇಹಿತರೊಂದೊಂದಿಗೆ ಮದ್ಯ ಸೇವಿಸಿ ರಾಮನಗರದ‌ ಸಿಂಗ್ರಬೋವಿದೊಡ್ಡಿಯಲ್ಲಿನ ಕೆರೆಯಲ್ಲಿ ಈಜಲು ತೆರೆಳಿದ್ದರು. ಈ ವೇಳೆ ಶಂಕರ್ ಕಾಲಿಗೆ ಗಿಡವೊಂದು ಸುತ್ತಿಕೊಂಡು ಈಜಲಾಗದೆ ಮುಳುಗಿದ್ದಾರೆ. ಹೀಗೆ ನೀರಿನಲ್ಲಿ ‌ಮುಳುಗಿದ ಅವರು ಉಸಿರಾಡಲಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬುಧವಾರದಿಂದ ಮೃತ ಶರೀರಕ್ಕಾಗಿ ರಕ್ಷಣ ತಂಡ ಶೋಧ ಕಾರ್ಯ ನಡೆಸಿದ್ದು, ಗುರುವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಪ್ರಕರಣ‌ ಸಂಬಂಧ ಇನ್ಮುಳಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!