
ಮುಂಬಯಿ: ಕಡಿಮೆ ದರದಲ್ಲಿ ಸಂಚರಿಸಬಹುದಾದ ಇಂಡಿಗೋ ಮತ್ತು ಗೋ ಏರ್ ವಿಮಾನಗಳ ಎಂಜಿನ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿಯಂತ್ರಾಣಾಲಯ 65 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ.
ಸುಮಾರು ಸಾವಿರ ವಿಮಾನಗಳು ಸಂಚರಿಸುವ ಗುರ್‌ಗಾವ್ ಮೂಲದ 47 ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದ್ದು, ವಾಡಿಯಾ ಗ್ರೂಪ್‌ನ ಗೋ ಏರ್ ವಿವಿಧ ನಗರಗಳಿಗೆ ಸಂಚರಿಸುವ 18 ವಿಮಾನಗಳ ಸಂಚಾರವೂ ರದ್ದಾಗಿದೆ.
ದೆಲ್ಲಿ, ಮುಂಬಯಿ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಬೆಂಗಳೂರು, ಪಾಟ್ನಾ, ಶ್ರೀನಗರ, ಭುವನೇಶ್ವರ್, ಅಮೃತಸರ್, ಅಮೃತಸರ್, ಶ್ರೀನಗರ, ಗೌಹಾತಿ ಸೇರಿ ದೇಶದ ವಿವಿಧ ನಗರಗಳಿಗೆ ಸಂಚರಿಸುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನವು 40 ನಿಮಿಷಗಳಲ್ಲಿಯೇ ಅಹ್ಮದಾಬಾದ್‌ಗೆ ಮರಳಿದ ಹಿನ್ನೆಲೆಯಲ್ಲಿ ನಿರ್ದೇಶನಾಲಯವು ವಿಮಾನಗಳ ಎಂಜಿನ್‌ಗಳನ್ನು ಪರೀಕ್ಷೆಗೊಳಪಡಿಸಿದ್ದು, ದೋಷವಿರುವುದು ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.