
ಬೆಂಗಳೂರು (ಮಾ. 13): ನಾನು ಕೆಳ ಹಂತದಿಂದ ರಾಜಕೀಯಕ್ಕೆ ಬಂದೆ. ಇದರಲ್ಲಿ ನನಗೆ ವೈಯಕ್ತಿವಾಗಿ ಯಾವುದೇ ಲಾಭವಾಗಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಮ್ಮ ಪಕ್ಷ ಇದೆ. ಚುನಾವಣೆ ಹತ್ತಿರ ಬರ್ತಿದೆ, ಇಡೀ ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬರಬೇಕು ಎಂದು ಪ್ರಚಾರ ಕಾರ್ಯಕ್ರಮವೊಂದರಲ್ಲಿ ಜಾರ್ಜ್ ಹೇಳಿದ್ದಾರೆ.
ಚುನಾವಣೆಯಲ್ಲಿ ಮಾತ್ರ ಬಿಜೆಪಿ ನಾಯಕರು ಹುಟ್ಟಿಕೊಳ್ಳುತ್ತಾರೆ. ಬೆಂಗಳೂರು ರಕ್ಷಿಸಿ ಅಂತ ಯಾತ್ರೆ ಮಾಡ್ತಾರೆ. ಇದು ಹಾಸ್ಯಾಸ್ಪದ ವಿಚಾರ . ನಮ್ಮ ಲೋಕ ಸಭಾ ಸದಸ್ಯರು ಏನೂ ಕೆಲಸ ಆಗಿಲ್ಲ ಅಂತಾರೆ ಆದರೆ ಅವರು ಕಣ್ತೆರೆದು ನೋಡಿಲ್ಲ ಬಿಜೆಪಿ ಅವರಿಗೆ ನಡುಕ ಶುರುವಾಗಿ ಬಿಟ್ಟಿದೆ. ಅಮೀತ್ ಶಾ ಅವರನ್ನು ಸುಳ್ಳು ಹೇಳಲು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. 10 % ಕಮಿಷನ್ ಸರ್ಕಾರ ಅಂತ ಪ್ರಧಾನಿ ಹೇಳ್ತಾರೆ. ಈ ಹೇಳಿಗೆ ಏನು ದಾಖಲೆಗಳು ಇವೆ? ನಾವು 10 % ಕಮಿಷನ್ ಆದರೆ ಮೋದಿ ಅವರದು ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ? 25 ಲಕ್ಷ ಕೋಟಿಯಲ್ಲಿ ಮೋದಿ ಅವರೇ ನೀವು ಎಷ್ಟು ಕಮಿಷನ್ ಹೊಡೆದಿದ್ದೀರಾ? 17 ಸಾವಿರ ಕೋಟಿ ಸಬರ್ಬನ್ ಟ್ರೈನಿಗೆ ಕೊಟ್ಟಿದ್ದೀವಿ ಅಂತಾರೆ ಸಬರ್ಬನ್ ಗೆ 350 ಕೋಟಿ ನಮ್ಮ ಮುಖ್ಯಮಂತ್ರಿ ಕೊಟ್ಟಿದ್ದಾರೆ ಎಂದು ಜಾರ್ಜ್ ಹೇಳಿದ್ದಾರೆ.
ಹಸಿರು ಬಾವುಟ ಮಾತ್ರ ತೋರಿಸಲು ಪ್ರಧಾನಿ ಬರ್ತಾರೆ. ಅನಂತ್ ಕುಮಾರ್, ಸದಾನಂದ ಗೌಡ ಅವರಿಗೆ ನಾನು ಪ್ರಶ್ನೆ ಮಾಡ್ತೀನಿ ನಗರಕ್ಕೆ ನೀವೇನು ಕೊಡುಗೆ ನೀಡಿದ್ದೀರಾ? ಬೆಂಗಳೂರು ಅಭಿವೃದ್ಧಿಗೆ ವಿರೋಧವಾಗಿರುವವರು ಲೋಕ ಸಭೆಗೆ ಆಯ್ಕೆ ಆಗಿದ್ದಾರೆ. ರಾಜ್ಯ ಸಭೆಯಲ್ಲೂ ಅದೇ ರೀತಿ ಆಗಿದೆ. ಬೆಂಗಳೂರಿಗೆ ಬಂದು ಮತ ಯಾಚಿಸಲು ನಿಮಗೆ ನಾಚಿಕೆ ಆಗಲ್ವಾ? ಬಿಜೆಪಿ ಅವರೇ ರಾತ್ರೋ ರಾತ್ರಿ ಟೆಂಡರ್ ಕರೆದು ಲೂಟಿ ಹೊಡೆದಿದ್ದು ಬಿಜೆಪಿಯವರು. ನಾವು ದಾಖಲೆ ಇಟ್ಟುಕೊಂಡು ಮಾತಾಡ್ತೀವೆ ಹೊರತು ಬಿಜೆಪಿ ಅವರಂತೆ ಮನ್ ಕಿ ಬಾತ್ ಮಾಡಲ್ಲ, ಕಾಮ್ ಕಿ ಬಾತ್ ಮಾಡುತ್ತೇವೆ ಎಂದು ಜಾರ್ಜ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.