ಬೋಸ್ ಇಸ್ ಬಾಸ್: ಇಂಗ್ಲೆಂಡ್ ನೋಟಿನಲ್ಲಿ ಭಾರತದ ವಿಜ್ಞಾನಿ!

By Web DeskFirst Published Nov 29, 2018, 1:10 PM IST
Highlights

ಭಾರತದ ಹೆಮ್ಮೆಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರಿಗೆ ಇಂಗ್ಲೆಂಡ್ ಗೌರವ! 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಜಗದೀಶ್ ಚಂದ್ರ ಬೋಸ್ ಭಾವಚಿತ್ರ! ನೋಟಿನ ಮೇಲೆ ಬ್ರಿಟೀಶ್ ಸೈನ್ಸ್ ಗೆ ಕೊಡುಗೆ ನೀಡಿದ ಖ್ಯಾತ ವಿಜ್ಞಾನಿಗಳ ಭಾವಚಿತ್ರ! ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಗೂ ಜಗದೀಶ್ ಚಂದ್ರ ಬೋಸ್ ಅವರಿಗೂ ವಿಶೇಷವಾದ ಭಾಂಧವ್ಯ  

ಲಂಡನ್(ನ.29): ಸಸ್ಯಗಳಿಗೂ ಜೀವ ಇದೆ ಎಂದು ವಿಶ್ವಕ್ಕೆ ಸಾರಿದ ಭಾರತದ ಹೆಮ್ಮೆಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರಿಗೆ ಇಂಗ್ಲೆಂಡ್ ವಿಶಿಷ್ಟವಾಗಿ ಗೌರವ ಸೂಚಿಸಿದೆ. 

2020ರಲ್ಲಿ ಪ್ರಕಟವಾಗಲಿರುವ ಬ್ರಿಟನ್ ನ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ, ಭಾರತದ ಭೌತವಿಜ್ಞಾನಿ ಮತ್ತು ಶರೀರವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ರ ಭಾವಚಿತ್ರವನ್ನು ಆಯ್ಕೆ ಮಾಡಲಾಗಿದೆ.

50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಮುದ್ರಣವಾಗಲಿರುವ ಭಾವಚಿತ್ರಕ್ಕಾಗಿ 100 ವಿಜ್ಞಾನಿಗಳ ಭಾವಚಿತ್ರವನ್ನು ಅಂತಿಮಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಜಗದೀಶ್ ಚಂದ್ರ ಬೋಸ್ ಅವರ ಹೆಸರೂ ಇದೆ.

ಬ್ಯಾಂಕ್ ಆಫ್ ಇಂಗ್ಲೆಂಡ್ ಮುಂಬರುವ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಬ್ರಿಟೀಶ್ ಸೈನ್ಸ್ ಗೆ ಕೊಡುಗೆ ನೀಡಿದ ಖ್ಯಾತ ವಿಜ್ಞಾನಿಗಳ ಭಾವಚಿತ್ರವನ್ನು ಮುದ್ರಿಸಲು ಮುಂದಾಗಿದ್ದು, ಸ್ಟೀಫನ್ ಹಾಕಿಂಗ್ ಸೇರಿದಂತೆ ಹಲವರ ಭಾವಚಿತ್ರವನ್ನು ಪರಿಗಣಿಸಿದೆ. 

ಈವರೆಗೂ ಒಟ್ಟಾರೆ 174,112 ನಾಮನಿರ್ದೇಶನಗಳು ಬಂದಿದ್ದು, ಮೊದಲ ಹಂತದಲ್ಲಿ ಅರ್ಹ ವಿಜ್ಞಾನಿಗಳ ಪಟ್ಟಿಯನ್ನು ತಯಾರಿಸುತ್ತಿದೆ. ಈ ಪೈಕಿ ಭಾರತದ ಬಂಗಾಳದಲ್ಲಿ 1858 ರಲ್ಲಿ ಜನಿಸಿದ್ದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ ಭಾವಚಿತ್ರವೂ ಆಯ್ಕೆಯಾಗಿದೆ.

ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಗೂ ಜಗದೀಶ್ ಚಂದ್ರ ಬೋಸ್ ಅವರಿಗೂ ವಿಶೇಷವಾದ ಭಾಂಧವ್ಯ ಇದ್ದು, 1884 ರಲ್ಲಿ ಕೇಂಬ್ರಿಡ್ಜ್ ವಿವಿಯಿಂದ ಪದವಿ ಪಡೆದು ಬೋಸ್ ಭಾರತಕ್ಕೆ ಮರಳಿದ್ದರು.

click me!