ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ: ಪೈಲಟ್‌ಗೆ ವಿಮಾನದಲ್ಲೇ ಕೋಳ!

By Web Desk  |  First Published Mar 11, 2019, 10:11 AM IST

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ| ಭಾರತೀಯ ಪೈಲಟ್‌ಗೆ ವಿಮಾನದಲ್ಲೇ ಕೋಳ|


ನವದೆಹಲಿ[ಮಾ.11]: ಮಕ್ಕಳ ಅಶ್ಲೀಲ ವಿಡಿಯೋ ಡೌನ್ ಲೋಡ್ ಮಾಡಿದ ಆರೋಪದ ಮೇಲೆ ಏರ್ ಇಂಡಿಯಾದ ಪೈಲಟ್‌ಗೆ ಅಮೆರಿಕದ ಅಧಿಕಾರಿಗಳು, ಪ್ರಯಾಣಿಕರ ಎದುರೇ ಕೊಳ ತೊಡಿಸಿದ ಘಟನೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದಿದೆ.

ಮಕ್ಕಳ ಅಶ್ಲೀಲ ವಿಡಿಯೋ ಡೌನ್‌ಲೋಡ್, ನೋಡುವುದು ಅಮೆರಿಕದಲ್ಲಿ ಅಪರಾಧವಾದ ಕಾರಣ, ವಿಮಾನ ಸ್ಯಾನ್ಸ್‌ಫ್ರಾನ್ಸಿಸ್ಕೋಗೆ ಬಂದಿಳಿ ಯುತ್ತಿದ್ದಂತೆ ಅಧಿಕಾರಿಗಳು ವಿಮಾನ ದೊಳಗೆ ಪ್ರವೇಶಿ, ಪ್ರಯಾಣಿಕರ ಎದುರೇ ಪೈಲಟ್‌ಗೆ ಕೊಳ ತೊಡಿಸಿ ಕರೆದೊಯ್ದರು.

Tap to resize

Latest Videos

ಬಳಿಕ ಪೈಲಟ್ ವೀಸಾ ರದ್ದುಪಡಿಸಿದ, ಪಾಸ್ಪೋರ್ಟ್ ವಶಕ್ಕೆ ಪಡೆದು ಭಾರತಕ್ಕೆ ಗಡಿಪಾರು ಮಾಡಲಾಗಿದೆ.

click me!