'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿ ಭಾರತೀಯನನ್ನು ಕೊಂದ ಅಮೆರಿಕನ್

Published : Feb 24, 2017, 09:59 AM ISTUpdated : Apr 11, 2018, 12:55 PM IST
'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿ ಭಾರತೀಯನನ್ನು ಕೊಂದ ಅಮೆರಿಕನ್

ಸಾರಾಂಶ

ಆ್ಯಡಂ ಪುರಿನ್'ಟನ್ ಗುಂಡಿಟ್ಟು ಕೊಲ್ಲುವ ಮುನ್ನ 'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿದ್ದಾನೆ.

ವಾಷಿಂಗ್ಟನ್(ಫೆ.24): ಅಮೆರಿಕದಲ್ಲಿ ಮತ್ತೆ ಜನಾಂಗೀಯ ದ್ವೇಷಕ್ಕೆ ಭಾರತೀಯನೊಬ್ಬ ಬಲಿಯಾಗಿದ್ದಾನೆ. ಹೈದರಾಬಾದ್ ಮೂಲದ ಸಾಫ್ಟವೇರ್ ಇಂಜಿನಿಯರ್ ಶ್ರೀನಿವಾಸ್ ಕುಚಿಬೋತ್ಲಾ(32) ಎಂಬಾತನನ್ನು 51 ವರ್ಷದ ಆ್ಯಡಂ ಪುರಿನ್'ಟನ್ ಎಂಬ ಅಮೆರಿಕಾದ ಪ್ರಜೆ ಗುಂಡಿಟ್ಟು ಕೊಂದಿದ್ದಾನೆ.

ಆ್ಯಡಂ ಪುರಿನ್'ಟನ್ ಗುಂಡಿಟ್ಟು ಕೊಲ್ಲುವ ಮುನ್ನ 'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿದ್ದಾನೆ. ಘಟನೆಯಲ್ಲಿ ಇನ್ನಿತರ ಇಬ್ಬರು ಗಾಯಗೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಜನಾಂಗೀಯ ದ್ವೇಷಕ್ಕೆ ಭಾರತೀಯನೊಬ್ಬ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.

ಹೈದರಾಬಾದ್ನ ಜವಹರ್ ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿರುವ  ಶ್ರೀನಿವಾಸ್ ಕುಚಿಬೋತ್ಲಾ ನಂತರ ಅಮೆರಿಕಾದ ಟಾಕ್ಸಸ್ ವಿವಿಯಿಂದ ಸ್ವಾತಕೋತ್ತರ ಪದವಿ ಪಡೆದಿದ್ದರು. ನಂತರ ಯುಎಸ್'ನ ಒಲ್ತೆ'ದ ಪಟ್ಟಣದಲ್ಲಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ನಿನ್ನೆ ಸ್ನೇಹಿತರೊಂದಿಗೆ ಕ್ಯಾನ್ವಾಸ್ ಬಾರ್'ನ ನೈಟ್ ಕ್ಲಬ್'ಗೆ ಹೋಗಿದ್ದಾಗ ಹತ್ಯೆ ಸಂಭವಿಸಿದೆ.

ಜನಾಂಗೀಯ ಹತ್ಯೆಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಸ್ವರಾಜ್, ಅಮೆರಿಕಾದ ಹಿಂದು ಸಂಘಟನೆ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಡವರ ಬೆನ್ನಿಗೆ ಇಂಧನ ಬಾಂಬ್‌ ಕಟ್ಟಿದ ಪಾಕಿಸ್ತಾನ, ಪೆಟ್ರೋಲ್‌ ಪ್ರತಿ ಲೀಟರ್‌ಗೆ 55 ರೂಪಾಯಿ ಏರಿಕೆ!
Karnataka Budget 2026: ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್‌ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!