
ಬೆಂಗಳೂರು (ಫೆ.24): ಡೈರಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಜಿ. ಪರಮೇಶ್ವರ್. ಸಿಎಂ, ಸಚಿವರು ರಾಜೀನಾಮೆ ಕೊಡ್ಬೇಕು ಎಂದು ಹೇಳ್ತಾ ಇರುವುದು ವಿರೋಧ ಪಕ್ಷವಾದ ಬಿಜೆಪಿಯವರ ಸಹಜವಾದ ನಡೆಯಾಗಿದೆ.
ಇದನ್ನು ನಾನು ತಪ್ಪು ಅಂತ ಹೇಳಲ್ಲ. ಬಹಿರಂಗವಾಗಿರುವ ಡೈರಿ ಸುಳ್ಳು ಅಂತಲೂ ಹೇಳಲ್ಲ, ಹಾಗಂತ ಅದು ನಿಜವೂ ಅಲ್ಲ., ಎಂದು ಪರಮೇಶ್ವರ್ ಹೇಳಿದ್ದಾರೆ.
ಆದರೆ ಈ ಡೈರಿ ಗೋವಿಂದರಾಜ್ ನಿವಾಸದಲ್ಲೇ ಸಿಕ್ಕ ಡೈರಿಯೇ ಎಂಬುವುದನ್ನು ಕೇಂದ್ರ ಸರ್ಕಾರ ಅಥವಾ ಐಟಿ ಇಲಾಖೆಯವರೇ ಬಹಿರಂಗಪಡಿಸಬೇಕಿದೆ, ಇದರಿಂದ ಸತ್ಯಾಂಶ ಹೊರ ಬರಲಿದೆ. ದೇಶದ ಜನತೆಗೆ ಸತ್ಯವನ್ನು ತಿಳಿಸಬೇಕಿದೆ, ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.