
ನವದೆಹಲಿ, [ಫೆ.14]: ಫುಲ್ವಾಮಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ಗುರುವಾರ ನಡೆಸಿರುವ ದಾಳಿಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಈ ದಾಳಿಗೆ ಇಡೀ ವಿಶ್ವವೇ ಖಂಡನೆ ವ್ಯಕ್ತಪಡಿಸಿದ್ದು, ಕೆಲ ರಾಷ್ಟ್ರಗಳು ಭಾರತಕ್ಕೆ ಬೆನ್ನೆಲುಬಾಗಿ ನಿಲ್ಲುವ ಮಾತುಗಳನ್ನಾಡುತ್ತಿವೆ. ಮತ್ತೊಂದೆಡೆ ಉಗ್ರರ ಹಟ್ಟಹಾಸಕ್ಕೆ ಇಡೀ ಭಾರತವೇ ರೊಚ್ಚಿಗೆದ್ದಿದ್ದು, ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ, ಅಂತಿದೆ.
ಭಾರತದ ಬೆಂಬಲಕ್ಕೆ ಬಂತು ಜಗತ್ತು: ಪಾಕ್‌ಗೆ ಕಾದಿದೆ ಆಪತ್ತು!
ಉಗ್ರ ಸಂಘಟನೆ ಕೃತ್ಯಕ್ಕೆ ಬೆಂಬಲಿಸುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲೇಬೇಕು, ಇನ್ನೊಂದು ಬಾರಿ ಸರ್ಜಿಕಲ್ ಸ್ಟ್ರೖಕ್ ಆಗಲೇ ಬೇಕು ಎನ್ನುವುದು ಭಾರತದ ಒಕ್ಕೊರಲಿನ ಕೂಗು.
ಭಾರತದ ಪ್ರತೀಕಾರಕ್ಕೆ ಬೆದರಿದ ಪಾಕ್, ಭದ್ರತಾ ಸಂಸ್ಥೆಗಳೊಂದಿಗೆ ಟಾಕ್..!
ಉಗ್ರರಿಗೆ ಪ್ರೋತ್ಸಾಹಿಸುವ ಪಾಕ್ ಧ್ವಜವನ್ನು ಸುಟ್ಟು ಸೇಡಿಗೆ ಸೇಡು ಆಗಲೇಬೇಕೆಂಬ ಘೋಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರಾಜ್ಯದಲ್ಲೂ ಭುಗಿಲೆದ್ದ ಆಕ್ರೋಶ
ಇತ್ತ ಕರ್ನಾಟಕದಲ್ಲೂ ಉಗ್ರರ ದಾಳಿ ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಧಾರವಾಡ ಮತ್ತು ಕಾರವಾರಗಳಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ರಾತ್ರಿ ಉಗ್ರರ ಕೃತ್ಯ ಖಂಡಿಸಿ ಪ್ರತಿಭಟಿಸಿದವು.
ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪಾಕಿಸ್ತಾನದ ಧ್ವಜವನ್ನು ದಹಿಸಿ, ತುಳಿದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಯುದ್ಧದ ಮೂಲಕ ದುಷ್ಟ ಪಾಕ್‌ಗೆ ಪಾಠ ಕಲಿಸುವಂತೆ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.