
ನವದೆಹಲಿ (ಡಿ.12): ಕೇಂದ್ರ ಸರ್ಕಾರ ನಗದು ರಹಿತ ಆರ್ಥಿಕತೆಯನ್ನು ನಿರ್ಮಾಣ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಈ-ವಾಲೆಟ್ ಮುಖಾಂತರ ಡಿಜಿಟಲ್ ವ್ಯವಹಾರ ಮಾಡುವುದರಿಂದ 2017 ರಲ್ಲಿ ವಂಚನೆ ಪ್ರಮಾಣ ಶೇ.60-65 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಮೊಬೈಲ್ ವಂಚಕರು ಕಂಪನಿಗಳ ಮೇಲೆ ಕಣ್ಣಿಟ್ಟಿದ್ದು, ಬಹುಪಾಲು ಕಂಪನಿಗಳ ಶೇ. 40-45 ರಷ್ಟು ಹಣಕಾಸಿನ ವ್ಯವಹಾರ ಮೊಬೈಲ್ ಗಳ ಮೂಲಕ ನಡೆಯುತ್ತದೆ. 2017 ರಲ್ಲಿ ಶೇ. 60-65 ರಷ್ಟು ಮೊಬೈಲ್ ವಂಚನೆ ಹೆಚ್ಚಾಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ವಂಚನೆ ಪ್ರಕರಣ ಕಳೆದ ಮೂರು ವರ್ಷಗಳಲ್ಲಿ 6 ಪಟ್ಟು ಹೆಚ್ಚಳವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.