ಬಾತ್'ರೂಮ್'ನಲ್ಲಿ 6.6 ಕೋಟಿ ಹಣ: ಹವಾಲ ಕಿಂಗ್'ಪಿನ್, ಚಿತ್ರನಟ ದೊಡ್ಡಣ್ಣನ ಅಳಿಯ ಕೆ.ಸಿ.ವೀರೇಂದ್ರನ ಬಂಧನ

By Suvarna Web Desk  |  First Published Dec 12, 2016, 12:55 PM IST

ವಿಚಾರಣೆ ವೇಳೆ ಎರಡು ಸಾವಿರದ ಹೊಸ ನೋಟುಗಳ ಎಲ್ಲಿಂದ ಪಡೆದದ್ದು? ಯಾವ ಬ್ಯಾಂಕ್ ನಿಂದ ಹಣ ಪಡೆದುಕೊಂಡಿದ್ದು? ವೀರೇಂದ್ರ ಖಾತೆ ಹೊಂದಿರುವ ಬ್ಯಾಂಕ್ಮ್ಯಾನೇಜರ್ ಗಳ ಜೊತೆಗಿನ ಸಂಬಂದ ಬಗ್ಗೆತೀವ್ರ ವಿಚಾರಣೆ ನಡೆಸಿದ್ದಾರೆ .


ಬೆಂಗಳೂರು(ಡಿ.12): ಬಾತ್​ರೂಮ್​ನಲ್ಲಿ 5.7 ಕೋಟಿ ಹೊಸ ನೋಟು ಸೇರಿ 6.6 ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದೊಡ್ಡಣ್ಣನ ಅಳಿಯ, ಹವಾಲಾ ಕಿಂಗ್​ಪಿನ್​ ಉದ್ಯಮಿ ಕೆ.ಸಿ.ವೀರೇಂದ್ರನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್, ಹವಾಲಾ ದಂಧೆ ರೂವಾರಿ ಗೋವಾದಲ್ಲಿ ಕ್ಯಾಶಿನೋ ಮಾಲೀಕರಾದ ಹುಬ್ಬಳ್ಳಿಯ ಸಮಂದ್ರಸಿಂಗ್ ಹಾಗೂ ಆತನ ಪಾಲುದಾರ ಚಿತ್ರದುರ್ಗದ ಕೆ.ಸಿ.ವಿರೆಂದ್ರ ಅಲಿಯಾಸ್ ಪಪ್ಪಿಯನ್ನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ.ನಿನ್ನೆ ತೆರಿಗೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ವೀರೇಂದ್ರನ್ನನ್ನು ಇಂದು ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕ ಕಚೇರಿಯಲ್ಲಿ ವಿಚಾರಣೆಗೆ ಗೊಳಪಡಿಸಲಾಗಿದೆ.

Latest Videos

ವಿಚಾರಣೆ ವೇಳೆ ಎರಡು ಸಾವಿರದ ಹೊಸ ನೋಟುಗಳ ಎಲ್ಲಿಂದ ಪಡೆದದ್ದು? ಯಾವ ಬ್ಯಾಂಕ್ ನಿಂದ ಹಣ ಪಡೆದುಕೊಂಡಿದ್ದು? ವೀರೇಂದ್ರ ಖಾತೆ ಹೊಂದಿರುವ ಬ್ಯಾಂಕ್  ಮ್ಯಾನೇಜರ್ ಗಳ ಜೊತೆಗಿನ ಸಂಬಂದ ಬಗ್ಗೆ  ತೀವ್ರ ವಿಚಾರಣೆ ನಡೆಸಿದ್ದಾರೆ . ಐಟಿ ಅಧಿಕಾರಿಗಳ ಪ್ರಶ್ನೆಗೆ ವೀರೇಂದ್ರ ನಾನು ಜನರನ್ನು ಬ್ಯಾಂಕ್ ಗಳ ಮುಂದೆ ನಿಲ್ಲಿಸಿ ಹಣ ವಿನಿಮಯ ಮಾಡಿಕೊಂಡಿದ್ದಾಗಿ ಬಾಯ್ಬಿಟಿದ್ದಾರೆ ಎನ್ನಲಾಗಿದೆ.

ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ ಬಳಿಕ ಸಿಬಿಐ ಅಧಿಕಾರಿಗಳು ಕೆ.ಸಿ ವೀರೇಂದ್ರನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಇನ್ನು  ಇಂದು ಹುಬ್ಬಳ್ಳಿಯ ಐಟಿ ಅಧಿಕಾರಿಗಳ ಮುಂದೆ  ಸಮಂದರ್ ಸಿಂಗ್ ವಿಚಾರಣೆ ಹಾಜರಾಗಿದ್ದು ಹುಬ್ಬಳ್ಳಿಯ ನವನಗರ ದಲ್ಲಿರುವ ಐಟಿ ಆಯುಕ್ತರ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ.ಇದೆ ಡಿಸೆಂಬರ್ 9 ಮತ್ತು 10 ರಂದು ಹುಬ್ಬಳ್ಳಿ ಹಾಗೂ ಚಿತ್ರದುಗ೯ದ ಚಳ್ಳೆಕೆರೆಯಲ್ಲಿ ಈ ಇಬ್ಬರಿಗೆ ಸೇರಿದ ಮನೆ, ಕಚೇರಿ ಮೇಲೆ ದಾಳಿ ನಡೆಸಿ 5.75 ಕೋಟಿ ನಗದು ಹಾಗೂ 28 ಕೆಜಿ  ಗಟ್ಟಿ ಬಂಗಾರ ಹಾಗೂ 4 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದರು.

click me!