ಕಪ್ಪು ಹಣ: ಸ್ವಿಸ್ ಬ್ಯಾಂಕ್ ಖಾತೆದಾರರಿಗೆ ಇನ್ನೊಂದು ಆಘಾತ

By Suvarna Web DeskFirst Published Nov 22, 2016, 9:08 AM IST
Highlights

ಸ್ವಿಸ್ ಬ್ಯಾಂಕ್ ಖಾತೆಗಳ ಮಾಹಿತಿ ಸುಲಭವಾಗಿ ಪಡೆಯಲು ಭಾರತ ಸ್ವಿಡ್ಜರ್ ಲ್ಯಾಂಡ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ನವದೆಹಲಿ (ನ.22): ಕಪ್ಪುಹಣವನ್ನು ಹೊರತರಲು ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ಶಾಕ್ ಬೆನ್ನಲ್ಲೆ, ವಿತ್ತೀಯ ಇಲಾಖೆ ಕಾಳಧನಿಕರಿಗೆ ಇನ್ನೊಂದು ಆಫಾತ ನೀಡಲು ಮುಂದಾಗಿದೆ.

ತೆರಿಗೆ ಇಲಾಖೆ ಕಣ್ತಪ್ಪಿಸಿ ಸ್ವಿಸ್ ಬ್ಯಾಂಕ್ ನಲ್ಲಿ ಸೇಫ್ ಆಗಿ ಇಟ್ಟಿರುವ ಕಪ್ಪುಹಣಕ್ಕೆ ಇನ್ನುಂದೆ ಕತ್ತರಿ ಬೀಳಲಿದೆ. ಸ್ವಿಸ್ ಬ್ಯಾಂಕ್ ಖಾತೆಗಳ ಮಾಹಿತಿ ತನ್ನಿಂದತಾನೆ ಭಾರತಕ್ಕೆ ಲಭ್ಯವಾಗಲಿದೆ. 2019, ಸೆಪ್ಟೆಂವರ್ ನಂತರ ಸ್ವಿಸ್ ಬ್ಯಾಂಕಿನಲ್ಲಿಟ್ಟಿರುವ ಕಪ್ಪುಹಣದ ಪ್ರತಿಯೊಂದು ಮಾಹಿತಿಯು ಲಭ್ಯವಾಗಲಿದೆ ಎಂದು ವಿತ್ತೀಯ ಇಲಾಖೆ ಸ್ಪಷ್ಟಪಡಿಸಿದೆ.

Latest Videos

ಸ್ವಿಸ್ ಬ್ಯಾಂಕ್ ಖಾತೆಯ ಮಾಹಿತಿ ಸುಲಭವಾಗಿ ಪಡೆಯಲು ಭಾರತ ಸ್ವಿಡ್ಜರ್ ಲ್ಯಾಂಡ್ ಜೊತೆ ಒಪ್ಪಂದ ಮಾಡಿಕೊಂಡಿದೆ. 2018 ರ ನಂತರ ಇದು ಜಾರಿಯಾಗಲಿದ್ದು ತೆರಿಗೆ ಇಲಾಖೆಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

 

click me!