ಕೇಂದ್ರ ಸಚಿವರಿಗೂ ತಟ್ಟಿದ ನೋಟ್ ಬ್ಯಾನ್ ಬಿಸಿ

Published : Nov 22, 2016, 08:12 AM ISTUpdated : Apr 11, 2018, 01:02 PM IST
ಕೇಂದ್ರ ಸಚಿವರಿಗೂ ತಟ್ಟಿದ ನೋಟ್ ಬ್ಯಾನ್ ಬಿಸಿ

ಸಾರಾಂಶ

ಕೇಂದ್ರ ಸಚಿವ ಸದಾನಂದಗೌಡರಿಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ. ಸಹೋದರನ ಮೃತದೇಹ ಪಡೆಯಲು ಡಿವಿಎಸ್ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ,  ಹಳೆ ನೋಟುಗಳನ್ನ ಪಡೆಯಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿದ್ದರು. ಹಳೆ ನೋಟು ಪಡೆಯದಿದ್ದಕ್ಕೆ ಆಸ್ಪತ್ರೆ ವಿರುದ್ಧ ಸದಾನಂದಗೌಡ ಗರಂ ಆಗಿದ್ದರು.

ಮಂಗಳೂರು(ನ.22): ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಸಹೋದರ ಡಿ.ವಿ. ಭಾಸ್ಕರ್ ಮೃತಪಟ್ಟಿದ್ದಾರೆ. ಪಿತ್ತಕೋಶ ವೈಫಲ್ಯದಿಂದ ನರಳುತ್ತಿದ್ದ ಅವರು ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಮೃತರ ನಿಧನವನ್ನು ದೃಢಪಡಿಸಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಹೋದರ ಅಗಲುವಿಕೆ ದುಃಖ ತಂದಿದೆ. ಮಂಡೆಕೋಲಿನ ಮನೆಯ ಆಧಾರಸ್ತಂಬವಾಗಿದ್ದರು ಎಂದು ಹೇಳಿದರು.

ಸಚಿವ ಕೃಷ್ಣ ಪಾಲೇಮಾರ್ ಸಹಿತ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಟ್ಟ ಬಳಿಕ ಮೃತದೇಹವನ್ನು ಹುಟ್ಟೂರು ಸುಳ್ಯದ ಮಂಡೆಕೋಲಿಗೆ ಕೊಂಡೊಯ್ಯಲಾಯಿತು.

ಈ ಮಧ್ಯೆ, ಕೇಂದ್ರ ಸಚಿವ ಸದಾನಂದಗೌಡರಿಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ. ಸಹೋದರನ ಮೃತದೇಹ ಪಡೆಯಲು ಡಿವಿಎಸ್ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ,  ಹಳೆ ನೋಟುಗಳನ್ನ ಪಡೆಯಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿದ್ದರು. ಹಳೆ ನೋಟು ಪಡೆಯದಿದ್ದಕ್ಕೆ ಆಸ್ಪತ್ರೆ ವಿರುದ್ಧ ಸದಾನಂದಗೌಡ ಗರಂ ಆಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಗಲಕೋಟೆ ಎನ್‌ಜಿಒ: ಬುದ್ಧಿಮಾಂದ್ಯನಿಗೆ ಹೊಡೆದ ನಾಲ್ವರು ಬಂಧನ
ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಲೋಪ ಆಗಿಲ್ಲ, ತಾಂತ್ರಿಕ ಸಮಸ್ಯೆ ಎಂದ ತಂಗಡಗಿ