ದಶಕದಲ್ಲಿ ಭಾರತ ವಿಶ್ವದ 3ನೇ ಪ್ರವಾಸಿ ಅರ್ಥಿಕ ರಾಷ್ಟ್ರ

By Suvarna Web DeskFirst Published Mar 23, 2018, 5:42 PM IST
Highlights

ಈಗಾಗಲೇ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ದಾಪುಗಾಲಿಟ್ಟು, ಮುನ್ನಡೆಯುತ್ತಿದೆ. ಇದೀಗ ಮತ್ತೊಂದು ಧನಾತ್ಮಕ ಸುದ್ದಿಯೊಂದು ಹೊರ ಬಿದ್ದಿದ್ದು, 2028ರ ವೇಳೆ  ವಿಶ್ವದಲ್ಲಿಯೇ ಮೂರನೇ ಅತೀ ದೊಡ್ಡ ಪ್ರವಾಸ ಮತ್ತು ಪ್ರಯಾಣ ಆರ್ಥಿಕತೆಯಾಗಿ ದೇಶ ಹೊರಹೊಮ್ಮಲಿದೆ.

ಹೊಸದಿಲ್ಲಿ: ಈಗಾಗಲೇ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ದಾಪುಗಾಲಿಟ್ಟು, ಮುನ್ನಡೆಯುತ್ತಿದೆ. ಇದೀಗ ಮತ್ತೊಂದು ಧನಾತ್ಮಕ ಸುದ್ದಿಯೊಂದು ಹೊರ ಬಿದ್ದಿದ್ದು, 2028ರ ವೇಳೆ  ವಿಶ್ವದಲ್ಲಿಯೇ ಮೂರನೇ ಅತೀ ದೊಡ್ಡ ಪ್ರವಾಸ ಮತ್ತು ಪ್ರಯಾಣ ಆರ್ಥಿಕತೆಯಾಗಿ ದೇಶ ಹೊರಹೊಮ್ಮಲಿದೆ.

ವಿಶ್ವ ಪ್ರಯಾಣ ಮತ್ತು ಪ್ರವಾಸ ಪರಿಷತ್ ಇಂಥದ್ದೊಂದು ವರದಿ ಬಿಡುಗಡೆ ಮಾಡಿದ್ದು, ಪ್ರವಾಸ ಕ್ಷೇತ್ರದಲ್ಲಿಯೇ ಭಾರತ ಸುಮಾರು ಒಂದು ಕೋಟಿಯಷ್ಟು ನೇರ ಅಥವಾ ಪರೋಕ್ಷ ಉದ್ಯೋಗಗಳು ಹೆಚ್ಚು ಸೃಷ್ಟಿಯಾಗಲಿವೆ, ಎಂದು ಹೇಳಿದೆ.

ಪ್ರವಾಸಿ ಕ್ಷೇತ್ರದಲ್ಲಿ ಪ್ರಸ್ತುತ 42.9 ದಶಲಕ್ಷ ಉದ್ಯೋಗಳಿದ್ದು, ಇದು 2028ರ ವೇಳೆಗೆ ಇದು 52.3 ದಶಲಕ್ಷವಾಗಲಿದ್ದು, ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಭಾರತ ಶ್ರಮಿಸಬೇಕೆಂದು ಪರಿಷತ್ ಹೇಳಿದೆ.
 

click me!