ಸುಖೋಯ್'ನಿಂದ ಬ್ರಹ್ಮೋಸ್ ಕ್ಷಿಪಣಿ ಪ್ರಯೋಗ ಯಶಸ್ವಿ

By Suvarna Web DeskFirst Published Nov 23, 2017, 10:48 AM IST
Highlights

ವಿಶ್ವದ ಅತ್ಯಂತ ಶರವೇಗದ ಕ್ಷಿಪಣಿ ಎಂದೇ ಹೆಸರುವಾಸಿಯಾಗಿರುವ, ಶಬ್ದಕ್ಕಿಂತ ವೇಗವಾಗಿ ಚಲಿಸುವ (ಮ್ಯಾಕ್ 2.8) ಬ್ರಹ್ಮೋಸ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಮುಂಚೂಣಿ ಯುದ್ಧ ವಿಮಾನವಾದ ‘ಸುಖೋಯ್ -30 ಎಂಕೆಐ’ನಿಂದ ಯಶಸ್ವಿ ಉಡಾವಣೆ ಮಾಡಲಾಗಿದೆ.

ನವದೆಹಲಿ (ನ.23): ವಿಶ್ವದ ಅತ್ಯಂತ ಶರವೇಗದ ಕ್ಷಿಪಣಿ ಎಂದೇ ಹೆಸರುವಾಸಿಯಾಗಿರುವ, ಶಬ್ದಕ್ಕಿಂತ ವೇಗವಾಗಿ ಚಲಿಸುವ (ಮ್ಯಾಕ್ 2.8) ಬ್ರಹ್ಮೋಸ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಮುಂಚೂಣಿ ಯುದ್ಧ ವಿಮಾನವಾದ ‘ಸುಖೋಯ್ -30 ಎಂಕೆಐ’ನಿಂದ ಯಶಸ್ವಿ ಉಡಾವಣೆ ಮಾಡಲಾಗಿದೆ.

ಇದರಿಂದಾಗಿ ಭಾರತೀಯ ವಾಯುಪಡೆಗೆ ಸಿಂಹಬಲ ಲಭಿಸಿದಂತಾಗಿದ್ದು, ಶತ್ರುಪಡೆಗಳು ಅದರಲ್ಲೂ ವಿಶೇಷವಾಗಿ ಪಾಕಿಸ್ತಾನ ಬೆದರುವಂತಾಗಿದೆ. ಬ್ರಹ್ಮೋಸ್ ಕ್ಷಿಪಣಿಯು ತನ್ನ ಒಡಲಲ್ಲಿರುವ ಕಂಪ್ಯೂಟರ್ ನಿರ್ದೇಶನದ ಮೇರೆಗೆ ಅತ್ಯಂತ ನಿಖರವಾಗಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಸುಖೋಯ್ ಯುದ್ಧ ವಿಮಾನ ದಿಂದ ಇದನ್ನು ಹಾರಿಸುವ ಪ್ರಯೋಗ ಯಶಸ್ವಿ ಯಾಗಿರುವು ದರಿಂದ ಭೂಮಿ, ಸಮುದ್ರ ಹಾಗೂ ವಾಯು ಮಾರ್ಗದಲ್ಲೂ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಸಾಮರ್ಥ್ಯ ಭಾರತಕ್ಕೆ ದಕ್ಕಿದಂತಾಗಿದೆ. ಫಲವಾಗಿ, 290 ಕಿ.ಮೀ. ದೂರದಲ್ಲಿರುವ ಶತ್ರು ಪಡೆಗಳ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಭಾರ ತೀಯ ಸಶಸ್ತ್ರ ಪಡೆಗಳಿಗೆ ದೊರೆತಂತಾಗಿದೆ.

Latest Videos

click me!