
ಬೆಂಗಳೂರು (ಜೂ. 27): ಮಾಜಿ ಸಿದ್ದರಾಮಯ್ಯ ನಡೆ ಕಾಂಗ್ರೆಸ್ ನಾಯಕರಿಗೆ ಆತಂಕ ಶುರು ಮಾಡಿಸಿದೆ. ಸಿದ್ದರಾಮಯ್ಯರ ಒಂದೊಂದು ಮಾತು ಸಮ್ಮಿಶ್ರ ಸರ್ಕಾರಕ್ಕೆ ಸಮಸ್ಯೆ ತಂದೊಡ್ಡುತ್ತಿದೆ. ಸಿದ್ದರಾಮಯ್ಯ ಸುಧಾರಿಸದಿದ್ರೆ ಕಷ್ಟವಾಗುತ್ತೆ ಅಂತಿದ್ದಾರೆ ಕೈ ನಾಯಕರು.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾತನಾಡಿದ್ರೆ ತಪ್ಪಾಗುತ್ತೆ ಅನ್ನೋ ಭಯ ಶುರುವಾಗಿದೆ. ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡಿ ವಿಧಾನ ಸಭಾ ಚುನಾವಣೆಯಲ್ಲಿ ಮಣ್ಣುಮುಕ್ಕಿದ್ವಿ. ಸಿದ್ದರಾಮಯ್ಯ ಅವರು ಗೌಡರ ವಿರುದ್ಧ ಮಾತನಾಡಿದ್ದರಿಂದ ಹಾಸನ,ಮಂಡ್ಯ,ರಾಮನಗರ,ತುಮಕೂರಿನಲ್ಲಿ ಜೆಡಿಎಸ್ ಗೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಪ್ರಯೋಜನವಾಗಲ್ಲ. ಕಾಂಗ್ರೆಸ್ ಅಭ್ಯರ್ಥಿಗಳು ಇರುವ ಕಡೆ ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರು ಬೆಂಬಲ ಕೊಡಲ್ಲ. ಹೀಗಾಗಿ ಸಿದ್ದರಾಮಯ್ಯ ಬಾಯಿಗೆ ಬೀಗ ಹಾಕಿಸಲು ಕೆಲ ನಾಯಕರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಹಾಲಿ ಸಂಸದರೇ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಬಳಿ ಮಾತನಾಡಲು ಖರ್ಗೆ ನೇತೃತ್ವದಲ್ಲಿ ಟೀಂ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದ್ದು ಇವರ ಬಾಯಿ ಮುಚ್ಚಿಸಿ. ಇಲ್ಲವೇ ಕರ್ನಾಟಕದಲ್ಲಿ ಕಾಂಗ್ರೆಸ್ ಮರೆತುಬಿಡಿ ಅಂತ ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಅವಶ್ಯಕತೆ ಇರೋದು ನಮಗೆ. ಬೇಕಿದ್ರೆ ಜೆಡಿಎಸ್ ನಾಳೆಯೇ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೆ. ನಮ್ಮ ಮುಂದೆ ಏನಿದೆ? ಸರ್ಕಾರ ಹೋದ್ರೆ ಆನಂದ್ ರಾವ್ ಸರ್ಕಲ್ ಬಳಿ ಇರೋ ಜಾಗವನ್ನು ಗಟ್ಟಿ ಮಾಡಿಕೊಳ್ಳಬೇಕಷ್ಟೇ ಅಂತ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.