ಭಾರತದಲ್ಲಿ ಆರೋಗ್ಯ ಸೂಚ್ಯಂಕ ತೀರ ಕೆಳಮಟ್ಟ: ಭೂತಾನ್, ಘಾನಾಗಿಂತ ಕಡೆ

By Internet deskFirst Published Sep 25, 2016, 7:36 AM IST
Highlights

ನ್ಯೂಯಾರ್ಕ್(ಸೆ.25): ಭಾರತದಲ್ಲಿ ಆರೋಗ್ಯ ಸೂಚಂಕ್ಯ ತೀರ ಕೆಳಮಟ್ಟದಲ್ಲಿದ್ದು 188 ದೇಶಗಳ ಪಟ್ಟಿಯಲ್ಲಿ 143ನೇ ಸ್ಥಾನದಲ್ಲಿದೆ. ನಮಗಿಂತ ಬಡ ಹಾಗೂ ಸಣ್ಣ ರಾಷ್ಟ್ರಗಳಾದ ಶ್ರೀಲಂಕಾ,ಭೂತಾನ್'ಗಿಂತ ನಮ್ಮ ದೇಶದ ಸ್ಥಿತಿ ಕಡಿಮೆಯಿದೆ ಎಂದು ಆರೋಗ್ಯ ಕಾರ್ಯಕ್ಷಮತೆ ಪ್ರಕಟಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ ಮೊದಲ ವಾರ್ಷಿಕ ಮೌಲ್ಯಮಾಪನ ವರದಿ ತಿಳಿಸಿದೆ.

ಆರೋಗ್ಯ ಕಾರ್ಯಕ್ಷಮತೆ ಪ್ರಕಟಿತ ವರದಿಯನ್ನು ನ್ಯೂಯಾರ್ಕ್'ನಲ್ಲಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಲ್ಲಿಸಲಾಗಿದೆ. ಭಾರತದಲ್ಲಿ ಮರಣ ಪ್ರಮಾಣ, ಮಲೇರಿಯಾ, ವಾಯು ಮಾಲಿನ್ಯ, ನೈರ್ಮಲ್ಯದ ಸಮಸ್ಯೆಯನ್ನು ಸುಧಾರಿಸಲಾಗಿಲ್ಲ.

ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಆರೋಗ್ಯ ಸೂಚಂಕ್ಯದ ಮಟ್ಟ ಕ್ರಮವಾಗಿ 149 ಹಾಗೂ 151ನೇ ಸ್ಥಾನದಲ್ಲಿವೆ.

ಆರೋಗ್ಯ ಸೂಚಂಕ್ಯದ 80 ಅಂಶಗಳಲ್ಲಿ ಸಾಂಕ್ರಾಮಿಕ ರೋಗಗಳು, ಅತಿಯಾದ ತೂಕ ಮತ್ತು ಹಾನಿಕಾರಕ ಮದ್ಯ ಬಳಕೆಯ ಪ್ರಮಾಣ ಕೂಡ ಭಾರತದಲ್ಲಿ ನಿಯಂತ್ರಿಸಲಾಗುತ್ತಿಲ್ಲ. ಐಸ್'ಲ್ಯಾಂಡ್,ಸಿಂಗಾಪುರ ಹಾಗೂ ಸ್ವಿಡನ್ ಹಾಗೂ ಇಂಗ್ಲೆಂಡ್ ದೇಶಗಳಲ್ಲಿ ಆರೋಗ್ಯ ಸೂಚಾಂಕ್ಯದ ಪ್ರಮಾಣ ಉತ್ತಮ ಸ್ಥಿತಿಯಲ್ಲಿವೆ.

click me!